Ad imageAd image

ಮಾದಕ ವ್ಯಸನವು ನಿಮ್ಮನ್ನು ಕಬಳಿಸುವ ಮೊದಲು ಮಾದಕ ವ್ಯಸನದಿಂದ ಹೊರಬನ್ನಿ: ಸಿಪಿಐ ಸುರೇಶ್

Bharath Vaibhav
ಮಾದಕ ವ್ಯಸನವು ನಿಮ್ಮನ್ನು ಕಬಳಿಸುವ ಮೊದಲು ಮಾದಕ ವ್ಯಸನದಿಂದ ಹೊರಬನ್ನಿ: ಸಿಪಿಐ ಸುರೇಶ್
WhatsApp Group Join Now
Telegram Group Join Now

ಪಾವಗಡ :ಪಟ್ಟಣದಲ್ಲಿ ಇರುವ ಎಸ್.ಎಸ್.ಕೆ. ಬಯಲು ರಂಗಮಂದಿರದಲ್ಲಿ 08-12-2025 ಸೋಮವಾರ ರಂದು 10:30 ಗಂಟೆಯ ಸಮಯಕ್ಕೆ ಪಾವಗಡ ಪಟ್ಟಣದ ಪೊಲೀಸ್ ಠಾಣೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ನೋಡಲ್ ಕೇಂದ್ರದ ಸಂಯೋಗದಲ್ಲಿ ನಶೆ ಮುಕ್ತ ಕರ್ನಾಟಕ ಮತ್ತು ಮಾದಕ ವಸ್ತು ಜಾಗೃತಿ ಕಾರ್ಯಕ್ರಮವನ್ನು ಹಂಬಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ. ಹಾಗೂ ಸರ್ಕಾರಿ ಪಿಯು ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಸಾಕ್ಷಾಚಿತ್ರಗಳು ಮತ್ತು ಉಪನ್ಯಾಸಗಳ ಮೂಲಕ ಮಾದಕ ವಸ್ತುಗಳ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಯಿತು.

ವಿದ್ಯಾರ್ಥಿಗಳು ಆರೋಗ್ಯ ಜೀವನಕ್ಕೆ ಹಾಯ್ ಹಾಯ್ – ಮಾದಕ ವಸ್ತುಗಳಿಗೆ ಬಾಯ್ ಬಾಯ್ ಎಂಬ ಘೋಷಣೆ ಕೂಗುತ್ತಾ ನಶೆ ಮುಕ್ತ ಪಾವಗಡ ನಿರ್ಮಾಣಕ್ಕೆ ಶಪಥ ಮಾಡಿದರು.

ಪಾವಗಡ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಅವರು ಮಾತನಾಡಿ
ದುಶ್ಚಟಗಳು ವ್ಯಕ್ತಿಯ ಜೀವನವನ್ನಲ್ಲದೆ ಕುಟುಂಬ ಮತ್ತು ಸಮಾಜದ ಶಾಂತಿಯನ್ನೂ ಹಾಳು ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಚಟಗಳಿಗೆ ಬಲಿಯಾಗದೆ ಉನ್ನತ ವ್ಯಾಸಂಗದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ಪಾವಗಡ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗಿರೀಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳು, ಸಿಇಟಿ ಗಳ ಮಹತ್ವವನ್ನು ತಿಳಿಸಿದರು ಮತ್ತು ವಿದ್ಯಾರ್ಥಿ ಜೀವನದ ಗುರಿಗಳನ್ನು ಸಾಧಿಸಲು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣಪ್ಪ ಅವರು ಧೂಮಪಾನ, ಮದ್ಯಪಾನ, ಆನ್ಲೈನ್ ಬೆಟ್ಟಿಂಗ್ ಹಾಗೂ ಆನ್ಲೈನ್ ಗೇಮ್‍ಗಳು ಯುವಕರ ಜೀವನವನ್ನೇ ಹಾಳು ಮಾಡುವುದಾಗಿ ತಿಳಿಸಿ ಜಾಗ್ರತೆ ವಹಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು. ಎಸ್.ಎಸ್.ಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮನೋಜ್ ಕುಮಾರ್. ಪಿಎಸ್ಐ ಶಿವಪ್ಪ. ಉಪನ್ಯಾಸಕರುಗಳಾದ ಬೊಮ್ಮಣ್ಣ, ರಘುವೀರಪ್ಪ, ದೊಡ್ಡಯ್ಯ. ಕರಿಯಣ್ಣ. ಇನ್ನೂ ಮುಂತಾದ ಪೊಲೀಸ್ ಇಲಾಖೆ ಎಸ್ ಬಿ ಕಾನ್ಸ್ಟೇಬಲ್ ದೀಪಕ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!