ಚಿಕ್ಕೋಡಿ : ಪ್ರತ್ಯೇಕ ಜಿಲ್ಲೆಯಾಗಿ ಮಾಡುವುದರಿಂದ ಲಾಭಗಳೇನು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಅಥಣಿ ತಾಲೂಕಿನಿಂದ ಬೆಳಗಾವಿಗೆ ಬಂದು ಹೋಗಬೇಕಾದ ನೂರಾ ಅರವತ್ತು ಕಿಲೋಮೀಟರ್ ಅಂದರೆ ಒಂದು ದಿನದ ಪ್ರವಾಸದಲ್ಲಿ ಕೆಲಸವಾಗುವುದಿಲ್ಲ ಅಲ್ಲಿ ಜನರು ವಸ್ತಿ ಮಾಡಿಕೊಂಡು ಹೋಗಬೇಕಾದರೆ ಎರಡು ದಿನಗಳ ಕಾಲ ಕಳಿಯಬೇಕಾಗುತ್ತದೆ ಆದ್ದರಿಂದ ಜನರಿಗೆ ತೊಂದರೆ ತುಂಬಾ ಆಗುತ್ತಿದೆ.
ಮೊದಲಿನಿಂದ ಸುಮಾರು ವರ್ಷಗಳಿಂದ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಎಂದು ಜನರು ಪರಿಚಯಿಸಿಕೊಂಡಿದ್ದಾರೆ ಹಾಗೂ ಪ್ರತಿಯೊಂದು ಆಫೀಸ್ ಸಬ್ ಡಿವಿಜನಗಳು ಇರುವುದರಿಂದ ಒಂದು ಎಸ್ ಪಿ ಇನ್ನೊಂದು ಡಿಸಿ ಆದರೆ ಆರು ತಾಲೂಕಿನ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ.
ಸುಮಾರು ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಿ ಎಂದು ಪಟ್ಟ ಹಿಡಿದು ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಎಂದು ಸುಮಾರು ಹಿರಿಯರು ಆಸೆ ಈಡೇರದೆ ಹಸು ನೀಗಿದ್ದಾರೆ ಹಾಗಾಗಿ ಈ ವರ್ಷದ ಚಳಿಗಾಲ ಆದಿವೆಶವನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ನಾಗಿ ಮಾಡಲೇಬೇಕು ಎಂದು ಪಟ್ಟು ಹಿಡಿದು ಹೋರಾಟ ಮಾಡುತ್ತಿರುವ ಚಿಕ್ಕೋಡಿ ಜಿಲ್ಲಾ ಹೊರಟ ಸಮಿತಿ ಹೋರಾಟಗಾರರು.
ಚಿಕ್ಕೋಡಿ ಜಿಲ್ಲಾ ಹೊರಟ ಸಮಿತಿಯ ಮುಖಂಡರು ಈ ವಿಷಯ ಕುರಿತು ಮಾತನಾಡಿದರೆ ಬನ್ನಿ ಕೇಳೋಣ.
ಈ ಸಂದರ್ಭದಲ್ಲಿ ಹಿರಿಯ ಸಮಾಜಸೇವಕರಾದ ಚಂದ್ರಕಾಂತ್ ಹುಕ್ಕೇರಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು ಸಂಜು ಬಡಿಗೇರ್, ಚಂದ್ರಶೇಖರ್ ಅರಭಾoವಿ, ಮಹಾದೇವ್ ಬಾರಗಾಲೆ, ಹಾಗೂ ಚಿಕ್ಕೋಡಿ ಜಿಲ್ಲಾ ಎಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




