ಚೇಳೂರು : ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವತಿಯಿಂದ ವಿಕಲಚೇತನರ ಸಮನ್ವಯ ಮತ್ತು ಉದ್ಯೋಗ ಮಾಹಿತಿ ಕುರಿತು ವಿಶೇಷ ಕಾರ್ಯಾಗಾರ ಹಾಗೂ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯು ಇದೇ ಡಿಸೆಂಬರ್ 11, 2025 ರ ಗುರುವಾರದಂದು ಮಧ್ಯಾಹ್ನ 12:30 ಕ್ಕೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಲಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ. ಅನಿತಾ ವೆಂಕಟರೆಡ್ಡಿ ರವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಕಲಚೇತನರ ಮಾಹಿತಿ ಮತ್ತು ಉದ್ಯೋಗ ವಿವರ ಕುರಿತ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ವಿಶೇಷ ಸಭೆಯ ಪ್ರಮುಖ ಉದ್ದೇಶವಾಗಿದೆ.
ಸಭೆಯಲ್ಲಿ ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ, ಆರೋಗ್ಯ ತಪಾಸಣೆ ಕುರಿತು ಚರ್ಚೆ ನಡೆಯಲಿದ್ದು, ಗ್ರಾಮ ಸಭೆಯು ಅನುಷ್ಠಾನ ಪತ್ರಿಕೆಯನ್ನು ಓದಿ ದಾಖಲಿಸುವ ಪ್ರಕ್ರಿಯೆಯನ್ನೂ ನಡೆಸಲಿದೆ.
ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಿಕಲಚೇತನರ ಬಂಧುಗಳೊಂದಿಗೆ ಗ್ರಾಮ ಮಟ್ಟದ ಎಲ್ಲಾ ಸಿಬ್ಬಂದಿ ವರ್ಗದವರು ಸಭೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಕೋರಲಾಗಿದೆ.
ವಿಕಲಚೇತನರ ಸಮನ್ವಯ ಮತ್ತು ಕಲ್ಯಾಣವು ನಮ್ಮ ಪಂಚಾಯಿತಿಯ ಪ್ರಮುಖ ಆದ್ಯತೆಯಾಗಿದೆ. ಈ ಸಭೆಯ ಮೂಲಕ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ನಾವು ಕಾರ್ಯನಿರ್ವಹಿಸುತ್ತೇವೆ.
– ಎಂ. ಅನಿತಾ ವೆಂಕಟರೆಡ್ಡಿ, ಅಧ್ಯಕ್ಷರು, ಪಾಳ್ಯಕೆರೆ. ಗ್ರಾಂ ಪ.
ವಿಕಲಚೇತನರ ಮಾಹಿತಿ ಮತ್ತು ಉದ್ಯೋಗ ವಿವರಗಳ ಸರಿಯಾದ ದಾಖಲಾತಿಯು ಸರ್ಕಾರದ ಯೋಜನೆಗಳು ಮತ್ತು ಉದ್ಯೋಗಾವಕಾಶಗಳನ್ನು ತಲುಪಲು ಅಡಿಪಾಯವಾಗಿದೆ. ಎಲ್ಲಾ ಅರ್ಹ ಫಲಾನುಭವಿಗಳು ತಪ್ಪದೇ ಈ ಸಭೆಯಲ್ಲಿ ಭಾಗವಹಿಸಬೇಕು.
– ಕೆ. ವೆಂಕಟಾಚಲಪತಿ, ಪಿಡಿಓ, ಪಾಳ್ಯಕೆರೆ.




