ಮೊಳಕಾಲ್ಮುರು:ಕುಡಿಯಲು ಮನೆಯಲ್ಲಿ ದುಡ್ಡು ಕೊಡಲಿಲ್ಲ ಅನ್ನೋ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಇಲ್ಲೊಬ್ಬ ಆಸಾಮಿ ಮರವೇರಿ ಕುಳಿತ ಗಂಟೆಗಟ್ಟಲೆ ಪ್ರಹಸನ ನಡೆಸಿದ್ದಾನೆ.
ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿರುವ ಹೊಲದಲ್ಲಿ ಹುಣಸೆಮರ ಏರಿದ ಇದೆ ಗ್ರಾಮದ ನಾಗರಾಜ್ ಮನೆಯವರಿಗೆ ಬೆದರಿಸಿಲು ಮರವೇರಿ ಕುಳಿತಿದ್ದಾನೆ.

ಸ್ಥಳೀಯರು ಮತ್ತು ಕುಟುಂಬಸ್ಥರು ಈತನಿಗೆ ಏನೇ ತಿಳಿ ಹೇಳಿದರು ಕೂಡ ಮರ ಇಳಿದು ಬರಲಿಲ್ಲ,ಈ ವೇಳೆ ಸ್ಥಳೀಯರು 112 ಗೆ ಮಾಹಿತಿ ಮುಟ್ಟಿಸಿದ್ದಾರೆ,ಸ್ಥಳಕ್ಕೆ ಬಂದ 112 ಸಿಬ್ಬಂದಿಗಳು ಗ್ರಾಮಸ್ಥರ ಸಹಾಯದಿಂದ ಮರವೇರಿ ಕುಳಿತ ನಾಗರಾಜ್ ಅವರನ್ನು ಕೆಳಗಿಳಿಯುವಂತೆ ದುಂಬಾಲು ಬಿದ್ದರೂ ಸಹ ಮಾತು ಕೇಳಲಿಲ್ಲ, ಸತತವಾಗಿ ಒಂದು ಗಂಟೆ ಕಾಲ ಸತಾಯಿಸಿದ ಸ್ಥಳದಲ್ಲಿದ್ದ ಯುವಕ ಮರವೇರಿ ಆತನನ್ನು ಮರದಿಂದ ಕೆಳಗಿಳಿಸಿದ.
ಯಾವ ಕಾರಣಕ್ಕಾಗಿ ಮರ ಏರಿ ಕುಳಿತೆ ಅಂತ ಕೇಳಿದ್ರೆ ಈತನನ್ನು ಕೇಳಿದ್ರೆ ನನಗೆ ಮನೆಯಲ್ಲಿ ಕುಡಿಯಲಿಕ್ಕೆ ಹಣ ಕೊಡಲಿಲ್ಲ ಅದಕ್ಕಾಗಿ ನಾನು ಮರವೇರಿ ಕುಳಿತೇ ಎಂದಿದ್ದಾನೆ, ಕುಡುಕ ಮಾಡಿದ ಈ ಅವಾಂತರದಿಂದ ಗ್ರಾಮದಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು,ಕೊನೆಗೂ 112 ಸಿಬ್ಬಂದಿಗಳಾದ ಭೀಮಣ್ಣ, ರಮೇಶ್ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿದ್ದು ಈತನನ್ನು ಸಿಬ್ಬಂದಿಗಳು ಮನೆಗೆ ಬಿಟ್ಟು ಬಂದಿದ್ದಾರೆ.




