ಪಟ್ಟಣದ 9ನೇ ವಾರ್ಡಿನ ಶೌಚಾಲಯದ ಸುತ್ತಲೂ ತುಂಬಿರುವ ಮಲಮೂತ್ರ ವಿಸರ್ಜನೆಯ ಕೊಳಕು ನೀರು
ಎಷ್ಟೇ ಬಾರಿ ಹೇಳಿದರೂ ಇತ್ತ ಗಮನ ಕೊಡದ ಪಟ್ಟಣ ಪಂಚಾಯಿತಿ ಅಧಿಕಾರಿಗಳು
ಇದೇನಾ ನಿಮ್ಮ ಬಯಲು ಮುಕ್ತ ಶೌಚಾಲಯ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ಯಳಂದೂರು :ಪಟ್ಟಣದಲ್ಲಿರುವ ಪಟ್ಟಣ ಪಂಚಾಯಿತಿಯ ಒಂಬತ್ತನೇ ವಾರ್ಡಿನ ಸಾರ್ವಜನಿಕ ಶೌಚಾಲಯ ಸುತ್ತಲೂ ಸ್ವಚ್ಛತೆಯೇ ಇಲ್ಲದೆ ಮಲಮೂತ್ರ ವಿಸರ್ಜನೆಯ ಕೊಳಕು ನೀರಿನಿಂದ ತುಂಬಿ ತುಳುಕುತ್ತಿದೆ. ಬಹುತೇಕ ಈ ವಾರ್ಡಿನಲ್ಲಿ ಎಸ್ಸಿ ಎಸ್ಟಿ ಜನಾಂಗ ವಿದ್ದು ಶೌಚಾಲಯವನ್ನು ಉಪಯೋಗಿಸಲು ತೊಂದರೆಯಾಗುತ್ತಿದೆ ಪಟ್ಟಣ ಪಂಚಾಯಿತಿಗೆ ಎಷ್ಟೇ ಬಾರಿ ಹೋಗಿ ಹೇಳಿದರು ತಲೆಯನ್ನೇ ಕೆಡಿಕೊಳ್ಳದೆ ಅಧಿಕಾರಿಗಳು ಸುಮ್ಮನಿದ್ದಾರೆ ಹೆಲ್ತ್ ಇನ್ಸ್ಪೆಕ್ಟರ್ ಹೇಳಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ ಕೊಳಕು ನೀರಿನಿಂದ ಸೊಳ್ಳೆಗಳೆಲ್ಲ ಹೆಚ್ಚಾಗಿ ಅಕ್ಕಪಕ್ಕದ ಮನೆಯವರು ಅನಾರೋಗ್ಯ ಬೀಳುತ್ತಿದ್ದಾರೆ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಶೌಚಾಲಯ ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ತಿಳಿಸಿದರು.
ಸ್ಥಳೀಯರಾದ ಮಲ್ಲಿಕಾರ್ಜುನ್ ರವರು ಮಾತನಾಡಿ ಸುಮಾರು ದಿನಗಳಿಂದಲೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದರು ಇತ್ತ ಅವರು ಗಮನ ಹರಿಸಿಲ್ಲ ಇಲ್ಲಿ ಶೌಚಾಲಯದ ನೀರು ರಸ್ತೆಗೆ ಬಂದು ನಿಲ್ಲುತ್ತದೆ ಶೌಚಾಲಯದ ಹಿಂದೆ ಗಬ್ಬು ನಾರುತಿದೆ ಇನ್ನಾದರೂ ಎಚ್ಚೆತ್ತುಕೊಂಡು ಶೌಚಾಲಯವನ್ನು ಸರಿಪಡಿಸದಿದ್ದರೆ ಶೌಚಾಲಯಕ್ಕೆ ಬೀಗ ಹಾಕಲಾಗುವುದು ಎಂದು ತಿಳಿಸಿದರು.
ವರದಿ :ಸ್ವಾಮಿ ಬಳೇಪೇಟೆ




