Ad imageAd image

ಸದಲಗಾ ಮುರಾರ್ಜಿ ವಸತಿ ಶಾಲೆಯ ವಾರ್ಡನ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಸಿ ಅಶ್ಲೀಲ ವರ್ತನೆ

Bharath Vaibhav
ಸದಲಗಾ ಮುರಾರ್ಜಿ ವಸತಿ ಶಾಲೆಯ ವಾರ್ಡನ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಸಿ ಅಶ್ಲೀಲ ವರ್ತನೆ
WhatsApp Group Join Now
Telegram Group Join Now

ಚಿಕ್ಕೋಡಿ : ತಾಲೂಕಿನ ಸದಲಗಾ ಮುರಾರ್ಜಿ ವಸತಿ ಶಾಲೆಯಲ್ಲಿ ದಿನಾಂಕ 3/12/2025 ರಂದು ಶ್ರೀಕಾಂತ ಎರ್ನಾಳ್ ಎಂಬುವ ವಾರ್ಡನ್ 10 ನೇ ತರಗತಿಯ ಮೂರೂ ವಿದ್ಯಾರ್ಥಿನಿಯರಿಗೆ ಮೊಬೈಲನಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುವುದರ ಮುಖಾಂತರ ಅಶ್ಲೀಲ ವರ್ತನೆ ಎಸಗಿದ್ದಾನೆ.

ಈ ಪ್ರಕರಣದ ಯಳಿಯಳಿಯಾಗಿ ಬಿಚ್ಚಿಟ್ಟ ಪ್ರಿನ್ಸಿಪಾಲರು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ.

ದಿನಾಂಕ 9 3 2025 ರಂದು ಮಾಧ್ಯಮದ ಪ್ರತಿನಿಧಿಗಳು ಅಂದಾಜಿನ ಪ್ರಕಾರ ಈ ವಸತಿ ಶಾಲೆಗೆ ಭೇಟಿ ಕೊಟ್ಟಾಗ ಪ್ರಿನ್ಸಿಪಾಲರಿಗೆ ಇದಕ್ಕೆ ಸಂಬಂಧಪಟ್ಟoತೆ ನೇರ ಪ್ರಶ್ನೆ ಮಾಡ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ತವರೂರಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ಈ ವಸತಿ ಶಾಲೆಗೆ ಸಂಬಂಧಪಟ್ಟ ಪ್ರಿನ್ಸಿಪಾಲ್ ಚಂದ್ರಪ್ಪಾ ಮುರಗೋಡ ಇವರು ನಡೆದ ಘಟನೆಯನ್ನು ಈ ರೀತಿಯಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ ನೋಡಿ.

ನಡೆದ ಘಟನೆಯ ನಂತರ ವಾರ್ಡನಿಗೆ ಯಾವ ರೀತಿ ನೀವು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆವು.

ಈ ಪ್ರಕರಣ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಕೊಡಿ ಎಂದು ಕೇಳಿದೆವು ಪ್ರಿನ್ಸಿಪಾಲರು ಇಲ್ಲ ದಾಖಲೆಗಳನ್ನು ಕೊಡಲು ಆಗುವುದಿಲ್ಲ ಎಂದು ನೇರವಾಗಿ ಉತ್ತರಿಸಿದರು.

ಇಂತಹ ಘಟನೆಗಳನ್ನು ಅಲ್ಲಿಯೇ ಮುಚ್ಚಿ ಹಾಕುವುದರಿಂದ ಇನ್ನೂ ಏನೇನು ಚಟುವಟಿಕೆಗಳು ಮುಚ್ಚಿ ಹೋಗುತ್ತಿವೆ ಎಂಬುದು ಸಂಶಯ ವ್ಯಕ್ತವಾಗಿದೆ.

ಕಾರಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಾರ್ಡನ್ ಶ್ರೀಕಾಂತ್ ಎರ್ನಾಳ ಇವನನ್ನು ಕ್ರಮಕ್ಕೆ ಒಳಪಡಿಸಿ ಅಲ್ಲಿ ನಡೆದ ಘಟನೆ ಹಾಗೂ ಇದರ ಹಿಂದೆ ಕೂಡ ಏನಾದರೂ ಇಂತಹ ಘಟನೆ ನಡೆದಿದೆಯಾ ಎಂಬುದರ ಬಗ್ಗೆ ಖಚಿತ ಮಾಹಿತಿ ಪಡೆದು ಅವನ ಮೇಲೆ ಕ್ರಮ ಜರುಗಿಸಬೇಕಾಗಿದೆ.

ಆದರೆ ಇವರು ಬೆಳಗಾವಿ ಹಿಂದುಳಿದ ವರ್ಗಗಳ ಡಿ ಡಿ ಅವರಿಗೆ ನೇರವಾಗಿ ತಿಳಿಸಿದ್ದಾರೆ ಈ ಘಟನೆ ಆದರೆ ಈ ಪ್ರಕರಣವನ್ನು 6 ದಿನಗಳ ಬಳಿಕ ಬೆಳಕಿಗೆ ಬಂದಿದೆ.

ತಪ್ಪಿಸ್ತನ ಮೇಲೆ ಏನು ಕ್ರಮ ಜರುಗಿಸಿದ್ದಾರೆ ದಾಖಲಾತಿಗಳು ಯಾಕೆ ಕೊಡಲಿಲ್ಲ ಎಂಬ ಪ್ರಶ್ನೆ ಏನಾದರೂ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರಾ ಎಂಬ ಸಂಶಯ ವ್ಯಕ್ತವಾಗಿದೆ.

ಇಂತಹ ಘಟನೆಗಳು ಮತ್ತೆ ವಸತಿ ಶಾಲೆಯಗಳಲ್ಲಿ ನಡೆಯದಂತೆ ಮೇಲಾಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದೆ.

ಈ ವಿಷಯ ಕುರಿತು ಚಿಕ್ಕೋಡಿಯ ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ.

ಇನ್ನೂ ಇದಕ್ಕೆ ಸಂಬಂಧಪಟ್ಟ ಪ್ರಿನ್ಸಿಪಾಲರು ಅವರು ಮಾಧ್ಯಮಕ್ಕೆ ಬೇಕಾಗಿರುವ ದಾಖಲೆ ಕೊಡದೆ ಯಾಕೆ ದಾರಿ ತಪ್ಪಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!