ಚಡಚಣ :ಕಾನಿಪ ಘಟಕದ ಪದಾಧಿಕಾರಿಗಳ ಸತತ 3 ನೇಅವಧಿಗೆ ಅವಿರೋಧ ಆಯ್ಕೆ ;ಅಧ್ಯಕ್ಷರಾಗಿ ರಮೇಶ ಬಿರಾದಾರ,ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಡೋಣಜಮಠ,ಖಜಾಂಚಿಯಾಗಿ ವಿನಯ ಜೀರಂಕಲಗಿ ಪುನರ್‌ಆಯ್ಕೆ.
ಚಡಚಣ ತಾಲೂಕಾ ಕಾ.ನಿ.ಪ. ಘಟಕದ 2025-28ನೇ ಸಾಲಿನ ಚುನಾವಣೆ ಬುಧವಾರ ಜರುಗಿದ್ದು, ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ದೇವೆಂದ್ರಪ್ಪ ಹೆಳವರ, ರಾಜು ಕೊಂಡಗೂಳಿ, ಸದ್ದಾಂ ಜಮಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025-28ನೇ ಸಾಲಿಗೆ ಅಧ್ಯಕ್ಷರಾಗಿ ರಮೇಶ ಬಿರಾದಾರ, ಉಪಾಧ್ಯಕ್ಷರಾಗಿ ಸಂಗಮೇಶ ಹೂಗಾರ, ಅನೀಲ ಕೊಡತೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಡೋಣಜಮಠ, ಖಜಾಂಚಿಯಾಗಿ ವಿನಯ ಜೀರಂಕಲಗಿ, ಕಾರ್ಯದರ್ಶಿಗಳಾಗಿ ಪ್ರಶಾಂತ ಮುಂಡೇವಾಡಿ, ಸಂಗಮನಾಥ ಚಿಂಚೋಳಿ, ಕಾರ್ಯಕಾರಣಿ ಸದಸ್ಯರಾಗಿ ಭೀಮರಾಯ ಕಾರಂಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ದೇವೆಂದ್ರಪ್ಪ ಹೆಳವರ, ರಾಜು ಕೊಂಡಗೂಳಿ, ಸದ್ದಾಂ ಜಮಾದಾರ ಅವರು ಜಂಟಿಯಾಗಿ ಘೋಷಿಸಿದರು.
ಅಧ್ಯಕ್ಷರಾಗಿ ರಮೇಶ ಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಡೋಣಜಮಠ, ಖಜಾಂಚಿಯಾಗಿ ವಿನಯ ಜೀರಂಕಲಗಿ ಅವರು ಈ ಮೊದಲು 2022-2025 ಹಾಗೂ 2025-2028 ರ ಅವಧಿಗೆ ಅದೆ ಸ್ಥಾನಕ್ಕೆ 2ನೇ ಅವಧಿಗೆ ಅವಿರೋಧ ಆಯ್ಕೆ ಆಗಿದ್ದಾರೆ.
ಅವಿರೋಧ ಆಯ್ಕೆ ಪ್ರಕಟಣೆ ಹೊರಬೀಳುತ್ತಿದ್ದಂತೆ ಎಲ್ಲ ಸದಸ್ಯರು ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.
ಎಲ್ಲ ತಾಲೂಕು ಘಟಕಗಳು ಅವಿರೋಧ ಆಯ್ಕೆಗೆ ಮೋದಲ ಪ್ರಾಶಸ್ತ್ಯ ನೀಡಬೇಕು ಎಂದು ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಅಶೋಕ ಯಡಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹಾಗೂ ಚುನಾವಣೆ ಸಮೀತಿ ಮುಖ್ಯಸ್ಥರ ಮನವಿಗೆ ಸ್ಪಂಧಿಸಿದ ಚಡಚಣ ಕಾನಿಪ ಸಂಘದ ಸಹ ಸದಸ್ಯರು ಹಾಗೂ ಹಿರಿಯರಾದ ಅಲ್ಲಮಪ್ರಭು ಕರ್ಜಗಿ, ತುಕಾರಾಮ ಕೋಳಿ,ಮನೋಜಕುಮಾರ ಕಟಗೇರಿ ಹಾಗೂ ಶಂಕರೆಪ್ಪ ಹಾವಿನಾಳ,ಪ್ರಭಾಕರ ಗೂಳಿಪಾಟಿಲ ಅವರು ಎಲ್ಲ ಸದಸ್ಯರ ಮನವೋಲಿಸಿ ಚಡಚಣ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಇದು ಚಡಚಣ ಕಾನಿಪ ಘಟಕ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸತತ 3 ನೇಅವಧಿಗೆ ಎಲ್ಲ ಪದಾಧಿಕಾರಿಗಳ ಅವಿರೋಧ ಆಯ್ಕೆ ಆಗಿದ್ದು ಚಡಚಣ ತಾಲೂಕು ಘಟಕಕ್ಕೆ ಸಂದ ಗೌರವವಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಅಶೋಕ ಯಡಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹಾಗೂ ಚುನಾವಣೆ ಸಮೀತಿ ಮುಖ್ಯಸ್ಥರು ಹಾಗೂ ಚುನಾವಣಾ ಉಸ್ತುವಾರಿಗಳಾದ ದೇವೆಂದ್ರಪ್ಪ ಹೆಳವರ, ರಾಜು ಕೊಂಡಗೂಳಿ, ಸದ್ದಾಂ ಜಮಾದಾರ ಅವರು ಪ್ರಶಂಸಿದರು.
ಈ ಸಂದರ್ಭದಲ್ಲಿ ಚಡಚಣ ಕಾನಿಪ ಘಟಕದ ಎಲ್ಲ ಸದಸ್ಯರು ಸೇರಿ ಚುನಾವಣಾ ಉಸ್ತುವಾರಿಗಳಾದ ದೇವೆಂದ್ರಪ್ಪ ಹೆಳವರ, ರಾಜು ಕೊಂಡಗೂಳಿ, ಸದ್ದಾಂ ಜಮಾದಾರ ಅವರನ್ನು ಆದರಪೂರ್ವಕವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸಂಗಮ ,ಹಸನ ಮಕಾನದಾರ,ಲಕ್ಷ್ಮಣ ಶಿಂದೆ, ಬಸವರಾಜ ನೀಲವಾಣಿ ಹಾಗೂ ಚಡಚಣ ತಾಲೂಕಾ ಕಾ.ನಿ.ಪ. ಎಲ್ಲ ಸದಸ್ಯರು ಹಾಗೂ ಸಹಸದಸ್ಯರು ಇದ್ದರು.
ವರದಿ: ಉಮಾಶಂಕರ ಕ್ಷತ್ರಿ




