ಸಿಂಧನೂರು : ಡಿ13, ನಗರದ ಟೌನ್ ಹಾಲ್ ನಲ್ಲಿ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು ಇಂಟರ್ನೆಟ್ ಮೂಲಕ ನಡೆಯುವ ಮೋಸ ಹ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಿ ಅಪರಿಚಿತ ಲಿಂಕ್ ಗಳಿಗೆ ಸ್ಪಂದಿಸಬಾರದು ಪಾಸ್ವರ್ಡ್‌ಗಳನ್ನು ಸುರಕ್ಷಿತವಾಗಿರಬೇಕು ಮತ್ತು ಅಪಘಾತದಲ್ಲಿ ಜನವರಿ೨೦೨೫ ರಿಂದ ಇಲ್ಲಿಯವರೆಗೆ ಸುಮಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಎಂ. ಪುಟ್ಟಮಾದಯ್ಯ ರವರು ಹೇಳಿದರು.
ನಗರದ ಟೌನ್ ಹಾಲ್ ನಲ್ಲಿ ಸಿಂಧನೂರು ಪೋಲಿಸ್ ಉಪ ವಿಭಾಗದ ವತಿಯಿಂದ ಸೈಬರ್ ಅಪರಾಧಗಳ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ಸೈಬರ್ ಅಪರಾಧಗಳು ಮತ್ತು ವಾಹನಗಳ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ಬಹುತೇಕ ವಾಹನಗಳಿಗೆ ಇನ್ಸೂರೆನ್ಸ್ ರಿನಿವಲ್ ಬಾವುತೇಕರು ಮಾಡಿಸಿರುವುದಿಲ್ಲ ಸೈಬರ್ ಅಪರಾಧ ತಡೆಗಟ್ಟುವ ಉದ್ದೇಶದಿಂದ ಹಲವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರು ಪಟ್ಟು ದಂಡವನ್ನು ಕೂಡ ವಿಧಿಸಿದ್ದೇವೆ ಹಾಗೂ ಸೈಬರ್ ಅಪರಾಧಿಗಳು ನೇರವಾಗಿ ದರೋಡೆ ಮಾಡುವುದಿಲ್ಲ ಹಣದ ಆಸೆ, ಇತರೆ ಆಸೆಗಳನ್ನು ತೋರಿಸಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದರಲ್ಲೂ ವಿದ್ಯಾರ್ಥಿ ಯುವಜನರೇ ಸೈಬರ್ ಅಪರಾಧಿಗಳ ಕೈಗೆ ಸಿಕ್ಕಾಕಿಕೊಂಡು ಹಣವನ್ನು ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದ್ದು ಪ್ರತಿಯೊಬ್ಬರು ಓಟಿಪಿ ಹಾಗೂ ಮೊಬೈಲ್ ಪಾಸ್ವರ್ಡ್ ಗಳನ್ನು ಎಟಿಎಂ ಪಾಸ್ವರ್ಡ್ ಗಳನ್ನು ಯಾರಿಗೂ ಹೇಳದೆ ಗೌಪ್ಯವಾಗಿ ಇಡಬೇಕು ಎಂದು ಮಾಹಿತಿ ನೀಡಿದರು.
ಈ ವೇಳೆ ಡಿವೈಎಸ್ಪಿ ಜಿ. ಚಂದ್ರಶೇಖರ್, ತಹಶೀಲ್ದಾರ್ ಅರುಣ್ ದೇಸಾಯಿ, ತಾಲೂಕ ಪಂಚಾಯತಿ ಇ ಓ ಚಂದ್ರಶೇಖರ್, ಪೌರಯುಕ್ತ ಪಾಂಡುರಂಗ ಇಟ್ಟಿಗೆ ಸೇರಿದಂತೆ ಹಾಗೂ ಪಿಎಸ್ಐ ಗಳು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




