Ad imageAd image

ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 9369 ಮಕ್ಕಳು ಅಪಹರಣ

Bharath Vaibhav
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 9369 ಮಕ್ಕಳು ಅಪಹರಣ
WhatsApp Group Join Now
Telegram Group Join Now

ಬೆಂಗಳೂರು : ಗೃಹ ಇಲಾಖೆ ಇದೀಗ ಬೆಚ್ಚಿ ಬೀಳಿಸುವ ಅಂಕಿ ಅಂಶ ಬಹಿರಂಗಗೊಳಿಸಿದ್ದು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 9369 ಮಕ್ಕಳು ಅಪಹರಣಕ್ಕೆ ಒಳಗಾಗಿದ್ದಾರೆ ಇನ್ನು ಆತಂಕಕಾರಿ ವಿಚಾರ ಏನೆಂದರೆ ಅದರಲ್ಲಿ ಶೇಕಡ 71 ರಷ್ಟು ಬಾಲಕೇರಿ ಇದ್ದಾರೆ ಎನ್ನುವುದು ತೀವ್ರ ಕಳವಳಕಾರಿಯಾಗಿದೆ.

ಕಳೆದ ಮೂರು ವರ್ಷಗಳಲ್ಲಿ, 2023, 2024 ಹಾಗೂ 2025ರ ನವೆಂಬರ್ 15ರ ವರೆಗೆ ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿರುವ ವರದಿಯಾಗಿದೆ ಎಂದು ಗೃಹ ಇಲಾಖೆ ಅಂಕಿ-ಅಂಶ ನೀಡಿದೆ.

2023ರಲ್ಲಿ ರಾಜ್ಯದಲ್ಲಿ 3,039 ಮಕ್ಕಳು, 2024ರಲ್ಲಿ 3,411 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 3,189 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ.

ಮೂರು ವರ್ಷ ವರದಿಯಾಗಿರುವ ಅಪಹರಣ, ನಾಪತ್ತೆಯಾದ ಒಟ್ಟು ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣವೇ ಹೆಚ್ಚಿರುವುದು ಆಘಾತಕಾರಿ ವಿಚಾರವಾಗಿದೆ. ಈ ಅವಧಿಯಲ್ಲಿ ಸುಮಾರು 6,891 ಬಾಲಕಿಯರು ಅಪಹರಣ, ನಾಪತ್ತೆಯಾಗಿದ್ದಾರೆ.

ಅಂದರೆ ಒಟ್ಟಾರೆ ಮಕ್ಕಳ ಅಪಹರಣದಲ್ಲಿ 71.50%ರಷ್ಟು ಬಾಲಕಿಯರಿದ್ದಾರೆ. ಅಲ್ಲದೆ, ಒಟ್ಟು 2,748 ಗಂಡು ಮಕ್ಳಳು ಕಣ್ಮರೆ, ಅಪಹರಣಗೊಂಡಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಅದೇ ರೀತಿ ಬೆಂಗಳೂರು ನಗರ ಮಕ್ಕಳ ಅಪಹರಣಗಳಲ್ಲಿ ಅಗ್ರಸ್ಥಾನಿ ಎಂಬ ಕುಖ್ಯಾತಿ ಪಡೆದಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಸುಮಾರು 3,268 ಮಕ್ಕಳ ಅಪಹರಣವಾಗಿದೆ.

ಈ ಪೈಕಿ ಹೆಣ್ಣು ಮಕ್ಕಳ ಅಪಹರಣ ಸಂಖ್ಯೆ 2,290. ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ವರದಿಯಾಗಿರುವ ಮಕ್ಕಳ ಅಪಹರಣದ ಪೈಕಿ ಸುಮಾರು 24%ರಷ್ಟು ಬೆಂಗಳೂರಿನಲ್ಲೇ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!