ನವದೆಹಲಿ: ದೆಹಲಿಯಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದೆ. 10 ಗ್ರಾಂ ಗೆ 1,37,600 ರೂ.ಗೆ ಮಾರಾಟವಾಗಿದ್ದು, ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ಅಮೆರಿಕದ ಆರ್ಥಿಕ ವರದಿ ಬಿಡುಗಡೆ, ಖರೀದಿ ಹೆಚ್ಚಳ ಹಿನ್ನೆಲೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಒಂದೇ ದಿನ 4 ಸಾವಿರ ರೂಪಾಯಿ ಏರಿಕೆಯಾಗಿ 1,137,600 ರೂ.ಗೆ ಮಾರಾಟವಾಗಿದೆ. ಆಭರಣ ಚಿನ್ನದ ದರ 1,33,600 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 1,99,500 ರೂಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಶುದ್ಧತೆಯ 10 ಗ್ರಾಂ ಚಿನ್ನದ 1,27,200 ರೂ. ಹಾಗೂ 24 ಕ್ಯಾರಟ್ ಚಿನ್ನದ 10 ಗ್ರಾಂ ದರ 1,38,770 ರೂ., ಬೆಳ್ಳಿ ಕೆಜಿಗೆ 2.02 ಲಕ್ಷ ರೂಪಾಯಿಗೆ ಮಾರಾಟವಾಗಿದೆ.




