ಬೆಳಗಾವಿ : ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯವರೆಗೂ ಹೈಕಮಾಂಡ್ ಹೇಳುತ್ತೋ ಅಲ್ಲಿಯವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮೂರು ಬಾರಿ ಪುನರುಚ್ಚರಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕುಣಿಗಲ್ ಶಾಸಕ ರಂಗನಾಥ್ ಪ್ರಶ್ನೆ ಕೇಳಿದರು ಆಕ್ರೋಶ ಭರಿತರಾದಂತೆ ಶಾಸಕ ಎಚ್ ಡಿ ರಂಗನಾಥ್ ಪ್ರಶ್ನೆ ಕೇಳಿದರು.
ನಂತರ ಸ್ವಲ್ಪ ಸಮಯದ ಬಳಿಕ ನನಗೇನು ಸಿಟ್ಟಿಲ್ಲ ನಾನು ಮಾತನಾಡುವುದೇ ಹೀಗೆ ಅಂತ ರಂಗನಾಥ್ ಹೇಳಿದರು ಬಳಿಕ ರಂಗನಾಥ್ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು.
ಈ ವೇಳೆ ಬೇಕು ಅಂತಾನೆ ಹಾಗೆ ಕೇಳಿದ್ರಾ ಎಂದು ಆರ್ ಅಶೋಕ್ ಕೆಣಕಿದ್ದಾರೆ. ನೀವು ಉರಿಯುವ ಬೆಂಕಿಗೆ ಉಪ್ಪು ಹಾಕಬೇಡಿ ಅಂತ ಸಿದ್ದರಾಮಯ್ಯ ಹೇಳಿದರು.
ಹಾಗಾದರೆ ಉರಿಯುತ್ತಾ ಇದೆ ಅಂತ ಆಯ್ತಲ್ವಾ ಅಂತ ಅಶೋಕ್ ಅಂದಾಗ, ಉರಿಯುತ್ತಾ ಇಲ್ಲ ಅದು ಗಾದೆ ಅಂತ ಸಿದ್ದರಾಮಯ್ಯ ಹೇಳಿದರು. ನಮ್ಮಲ್ಲಿ ಹೈಕಮಾಂಡ್ ಇದೆ ಐದು ವರ್ಷ ಇರಿ ಅಂತ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ ಜನ ಬಿಜೆಪಿಗೆ ಒಮ್ಮೆಯೂ ಆಶೀರ್ವಾದ ಮಾಡಿಲ್ಲ.
2028 ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಈಗಲೂ ನಾನೇ ಸಿಎಂ ಹೈಕಮಾಂಡ್ ಹೇಳುವವರಿಗು ನಾನೇ ಸಿಎಂ ಆಗಿರುತ್ತೇನೆ. ನೀವು ಯಾಕೆ ಮೂವರನ್ನು ಮುಖ್ಯಮಂತ್ರಿ ಮಾಡಿದ್ದೀರಿ? ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ವೇಳೆ ಅಶೋಕ್ ಸಿದ್ದರಾಮಯ್ಯ ತಂತ್ರಗಾರಿಕೆ ಅಂತ ಪುಸ್ತಕ ಬರೆಯುತ್ತೇನೆ ಎಂದು ಅಧಿಕಾರದ ಹಸ್ತಾಂತರದ ವಿಚಾರವಾಗಿ ಸದನದಲ್ಲಿ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿತು.




