Ad imageAd image

ತಾಲೂಕು ಜೆಡಿಎಸ್ ಇಂದ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಆಚರಣೆ

Bharath Vaibhav
ತಾಲೂಕು ಜೆಡಿಎಸ್ ಇಂದ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಆಚರಣೆ
WhatsApp Group Join Now
Telegram Group Join Now

ತುರುವೇಕೆರೆ : ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ 66 ನೇ ಹುಟ್ಟುಹಬ್ಬವನ್ನು ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಶಾಸಕ ಎಂ.ಟಿ.ಕೃಷ್ಣಪ್ಪನವರ ಪುತ್ರ ವೆಂಕಟೇಶ್ ಕೃಷ್ಣಪ್ಪ ಹಾಗೂ ಗಣ್ಯರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಕೀಲ ಪಿ.ಹೆಚ್.ಧನಪಾಲ್ ಮಾತನಾಡಿ, ಕುಮಾರಸ್ವಾಮಿಯವರು ನಾಡು ಕಂಡ ಅಪರೂಪದ ರಾಜಕಾರಣಿ. ಸರಳ, ಸಜ್ಜನಿಕೆ, ಸಹೋದರತ್ವದ ಹೃದಯ ಹೊಂದಿರುವ ಕುಮಾರಸ್ವಾಮಿಯವರು ಅಪಾರವಾದ ರೈತಪರ, ಜನಪರ ಕಾಳಜಿಯನ್ನು ಹೊಂದಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಮನೆಬಾಗಿಲಿಗೆ ತೆರಳಿ ಅವರ ಕಷ್ಟಸುಖಗಳನ್ನು ಅರಿತು ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದ, ರೈತರ ಸಾಲಮನ್ನಾ ಮಾಡಿದ ದೇಶದ ಮೊದಲ ಹಾಗೂ ಜನರಿಗೆ ಕೊಟ್ಟ ಮಾತಿನಂತೆ ಅಭಿವೃದ್ದಿ ಪಥದಲ್ಲಿ ರಾಜ್ಯವನ್ನು ಮುನ್ನಡೆಸಿದ ಏಕೈಕ ಮುಖ್ಯಮಂತ್ರಿ ನಮ್ಮ ಕುಮಾರಣ್ಣ ಎಂದು ಬಣ್ಣಿಸಿದರು.

ಹುಟ್ಟುಹಬ್ಬ ಆಚರಣೆಯ ನಂತರ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್ ವಿತರಿಸಿದರು. ಆಚರಣೆಯಲ್ಲಿ ಜೆಡಿಎಸ್ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಎ.ಬಿ.ಜಗದೀಶ್, ಎನ್.ಆರ್.ಸುರೇಶ್, ಲೀಲಾವತಿಗಿಡ್ಡಯ್ಯ, ಎಂ.ಎನ್.ಚಂದ್ರೇಗೌಡ, ಹೆಚ್.ಎಸ್.ನಾಗರಾಜ್, ಕುಶಾಲ್ ಕುಮಾರ್, ವಿಜಯೇಂದ್ರಕುಮಾರ್, ಹೆಚ.ಆರ್.ರಾಮೇಗೌಡ, ವೆಂಕಟಾಪುರ ಯೋಗೀಶ್, ವಿಠಲದೇವರಹಳ್ಳಿ ಹರೀಶ್, ಮುದ್ದುಮಾರನಹಳ್ಳಿ ಶಿವಣ್ಣ, ಮಾದಿಹಳ್ಳಿ ಕಾಂತರಾಜು, ಆರ್.ಮಧು, ಟಿ.ಹೊಸಹಳ್ಳಿ ದೇವರಾಜ್, ಮಾರಪ್ಪನಹಳ್ಳಿ ದಿಲೀಪ್, ಬಡಗರಹಳ್ಳಿ ತ್ಯಾಗರಾಜ್, ಗೊಟ್ಟಿಕೆರೆ ಪ್ರಕಾಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!