ಹುಮನಾಬಾದ : ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಶಿವಶರಣ ಮಾದಾರ ಚೆನ್ನಯ್ಯನವರ 956ನೇ ಜಯಂತಿ ಹಾಗೂ ಒಳಮೀಸಲಾತಿ ಮುನ್ನೋಟ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಡಿಸೇಂಬರ್ 21ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಜಿಲ್ಲಾಧ್ಯಕ್ಷ ರವಿ ನಿಜಾಂಪುರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಮಾದರ ಚೆನ್ನಯ್ಯ ಅವರ ಜಯಂತಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಳಿಕ DMSS ಜಿಲ್ಲಾ ಅಧ್ಯಕ್ಷ ಪರಮೇಶ್ವರ್ ಕಾಳಮಂದರಗಿ ಮಾತನಾಡಿ,ಅಂದು ತಾಲ್ಲೂಕಿನ ಮಾಣಿಕ್ ನಗರದ ಮಾಣಿಕ್ ಸೌಧದಲ್ಲಿ ಬೆಳಗ್ಗೆ ಅತೀ ಸಂಭ್ರಮದಿಂದ ಜರಗುವ ಸಮಾರಂಭದಲ್ಲಿ ಸಮಾಜದ ಹಿರಿಯ ಗಣ್ಯರಾದ ಗೋವಿಂದ ಕಾರಜೋಳ,AN ನಾರಾಯಣ ಸ್ವಾಮಿ ಸೇರಿ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ತಾಲ್ಲೂಕಿನ ಮಾದಿಗ ಸಮಾಜ ಬಂಧುಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂತೋಷ ಪಾಟೀಲ,ಪಾಪ್ಪುರಾಜ ಚತುರೆ,ದತ್ತು ಮುದ್ನಾಳ,ರಾಜು ಕಾಣೆ,ಗಣಪತಿ ಅಷ್ಟೂರೆ, ಮಹೇಶ ಕಟ್ಟಿಮನಿ ಸೇರಿ ಅನೇಕರು ಇದ್ದರು.
ವರದಿ : ಸಜೀಶ್ ಲಂಬುನೋರ್




