Ad imageAd image

ಟ್ರಕ್ ಚಾಲಕರೇ ಕಳ್ಳರಿಂದ ಎಚ್ಚರಿಕೆ

Bharath Vaibhav
ಟ್ರಕ್ ಚಾಲಕರೇ ಕಳ್ಳರಿಂದ ಎಚ್ಚರಿಕೆ
WhatsApp Group Join Now
Telegram Group Join Now

ಬೆಳಗಾವಿ: ಹಿರೇ ಬಾಗೇವಾಡಿ ಘಾಟದಲ್ಲಿ ಚಲಿಸುವ ತುಂಬಿದ ವಾಹನದಲ್ಲಿ ಕಳ್ಳರ ಕೈಚಳಕ ಹಿರಿಯ ಬಾಗೇವಾಡಿ ಸಿ.ಪಿ.ಐ. ಸಾಹೇಬರೇ ಕಣ್ಮುಚ್ಚಿದಿರಾ.

ಸಾಹೇಬ್ರೆ ರಾತ್ರಿ ವಾಹನ ಚಾಲಕರು ಚಲಿಸುವಾಗ ನಿಮ್ಮ ಠಾಣಾ ವ್ಯಾಪ್ತಿಯ ಹಿರಿಬಾಗೇವಾಡಿ ಘಾಟದಲ್ಲಿ ಚಲಿಸುವ ವಾಹನಗಳ ಮೇಲೇರಿ ಕಳ್ಳರು ಈ ರೀತಿಯಾಗಿ ತಾಡಪತ್ರೆ ಹರಿದು ಅಕ್ಕಿ ಚೀಲ ಇನ್ನಿತರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದಾರೆ ಇಂತಹದ್ದೇ ಒಂದು ಘಟನೆ ನಿನ್ನೆ ರಾತ್ರಿ ಎರಡುವರೆ ಸುಮಾರಿಗೆ ನಡೆದಿದೆ ತಾವುಗಳು ಇಂತಹ ಅನಾಹುತಗಳನ್ನು ತಪ್ಪಿಸಬೇಕು.

ಬಡಪಾಯಿ ಚಾಲಕರು ಬರುವ ಬಾಡಿಗೆಯಲ್ಲಿ ವಾಹನಗಳಿಗೆ ಎಣ್ಣೆ ಹಾಗೂ ಇನ್ನಿತರ ಎಲ್ಲ ಖರ್ಚು ತೆಗೆದು ಬಾಡಿಗೆ ಉಳಿಯುವುದಿಲ್ಲ ಅಂತದ್ರಲ್ಲಿ ಇಂಥ ಕಳ್ಳತನಕ್ಕೆ ಅವರೇ ಹೊಣೆಗಾರರಾಗುತ್ತಾರೆ ಅವರು ಎಲ್ಲಿಂದ ಹನ ಪಾವತಿಸಬೇಕು ಹೇಳಿ ತಾವು ಎಚ್ಚೆತ್ತುಕೊಂಡು ಇತ್ತ ಕಡೆಗೆ ರಾತ್ರಿ ಸಮಯದಲ್ಲಿ ಗಮನ ಹರಿಸಬೇಕು.

ಮಾನ್ಯ ಎಸ್‌ಪಿ ಸಾಹೇಬರಿಗೆ ನಮ್ಮ ವಾಹಿನಿಯ ಮುಖಾಂತರ ನಾನು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ಸರ್ ಬಡಪಾಯಿ ಡ್ರೈವರ್ ಗಳಿಗೆ ದೊಡ್ಡ ಅನಾಹುತಗಳು ನಡೆಯುತ್ತಿವೆ ಇಂತಹ ಕದಿಮ ಕಳ್ಳರನ್ನು ಶಿಕ್ಷೆ ಆಗಬೇಕು ಅವರ ಮೇಲೆ ಕಠಿಣ ಕ್ರಮವಾಗಬೇಕು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!