Ad imageAd image

ನಾಗಲಮಡಿಕೆ ಗ್ರಾಮದ ಸುಬ್ರಮಣ್ಯ ದೇವಸ್ಥಾನದ ಜಾತ್ರೆ ಅಂಗಡಿಗಳು ಮತ್ತು ವಾಹನಗಳ ಸುಂಕು ಬಹಿರಂಗ ಹರಾಜು

Bharath Vaibhav
ನಾಗಲಮಡಿಕೆ ಗ್ರಾಮದ ಸುಬ್ರಮಣ್ಯ ದೇವಸ್ಥಾನದ ಜಾತ್ರೆ ಅಂಗಡಿಗಳು ಮತ್ತು ವಾಹನಗಳ ಸುಂಕು ಬಹಿರಂಗ ಹರಾಜು
WhatsApp Group Join Now
Telegram Group Join Now

ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ನಾಗಲಮಡಿಕೆ ಗ್ರಾಮದಲ್ಲಿ ದಿನಾಂಕ 24-12-2025 ರಿಂದ 04-01-2026 ರವರೆಗೆ ನಡೆಯಲಿರುವ ನಾಗಲಮಡಿಕೆ ಗ್ರಾಮದಲ್ಲಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾನುವಾರು ಜಾತ್ರೆಯಲ್ಲಿ ಸೇರುವ ಅಂಗಡಿಗಳು ಸೇರಿದಂತೆ ಇತರೇ ಸುಂಕ ವಸೂಲಿ ಮಾಡುವ ಕುರಿತು ದಿನಾಂಕ. 17/12/25 ಬುಧವಾರರಂದು 11:00 ಗಂಟೆಯ ಸಮಯಕ್ಕೆ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.

ಮುಜರಾಯಿ ಇಲಾಖೆಗೆ ಸೇರಿದ ಈ ಸುಬ್ರಮಣ್ಯೇಶ್ವರ ದೇಗುಲದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಾಗಿದೆ .

ಬಹಿರಂಗ ಹರಾಜಿನಲ್ಲಿ ಭಾಗವಹಿಸಿದ್ದ ಬಿಡ್ ದಾರರಿಂದ ಸವಾಲು ಮಾಡುವ ಮುನ್ನ ರೂ.1000/-(ಒಂದು ಸಾವಿರರೂ) ಠೇವಣಿ ಮಾಡಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ್ ಪ್ರಸಾದ್ ಮಾತನಾಡಿ ಜಾತ್ರೆಯ ಹರಾಜಿನಲ್ಲಿ ಭಾಗವಹಿಸಿ ಯಶಸ್ವಿಯಾದ ಸವಾಲುದಾರನು ಹರಾಜು ಮೊಬಲಗಿನ ನಾಲ್ಕನೇ ಒಂದು ಭಾಗವನ್ನು ಹರಾಜಿನ ಸ್ಥಳದಲ್ಲಿ ಮತ್ತು ಉಳಿದ ಮೊಬಲಗನ್ನು ಹರಾಜಿನ ಹದಿನೈದಿ ದಿನಗಳೊಳಗಾಗಿ ಸಂದಾಯ ಮಾಡತಕ್ಕದ್ದು, ಅದಕ್ಕೆ ತಪ್ಪಿದಲ್ಲಿ ಪ್ರಾರಂಭಿಕ ಮೊಬಲಗನ್ನು ಸಂಸ್ಥೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಹಕ್ಕನ್ನು ಎರಡನೇ ಅತಿ ಹೆಚ್ಚಿನ ಸವಾಲುದಾರರ ಪರವಾಗಿ ಸ್ಥಿರೀಕರಿಸಬಹುದು. ಹರಾಜಿನಲ್ಲಿ ನಿಗಧಿಪಡಿಸಿದ ದರಗಳ ಷೆಡ್ಯೂಲ್ ದರದಂತೆಯೇ ಇರತಕ್ಕದ್ದು. ಇದಕ್ಕೆ ಮೀರಿ ವಸೂಲಿ ಮಾಡಬಾರದು.ಅಲ್ಲದೆ ಈ ಭಾರಿ ದ್ವಿಚಕ್ರ ವಾಹನಗಳಿಗೆ ಯಾವುದೇ ರೀತಿಯ ಸುಂಕ ವಸೂಲಿ‌ ಮಾಡಬಾರದೆಂದು ತಿಳಿಸಲಾಯಿತು. ಒಂದು ವೇಳೆ ಒಂದು ವೇಳೆ ನಿಗಧಿಪಡಿಸಿದ ದರಕ್ಕಿಂತ ಮೀರಿ ವಸೂಲಿ ಮಾಡಿದರೆ ಕ್ರಮ ವಹಸಲಾಗುವುದು ಎಂದು ಹರಾಜಿನಲ್ಲಿ ಭಾಗವಹಿಸಿದ ಬಿಡ್ ದಾರರಿಗೆ ತಿಳಿಸಲಾಯಿತು.

ಸುಂಕು ಬಹಿರಂಗ ಹರಾಜು. ಮುಗಿದ ನಂತರ ಗ್ರೇಡ್-೨ ತಹಶೀಲ್ದಾರ್ ಪ್ರಸಾದ್ ರವರು ಕಚೇರಿಯಲ್ಲಿ ಮಾಧ್ಯಮ ಮಿತ್ರರ ಹತ್ತಿರ. ಮಾತನಾಡಿದರು.
ನಂತರ ನಡೆದ ಮೂರು ಹಂತದ ಹರಾಜಿನಲ್ಲಿ 50ಕ್ಕೂ ಹೆಚ್ಚು ಬಿಡ್ ದಾರರು ಭಾಗವಹಿಸಿದ್ದರು.
ಜಾತ್ರೆಯಲ್ಲಿ ಸೇರುವ ಅಂಗಡಿಗಳ ಮೇಲೆ ಸುಂಕ ವಸೂಲಿ ಮಾಡುವುದನ್ನು ಹರಾಜಿನ ಮೂಲಕ ಮುರುಳಿ S/o ತಿಪ್ಪಣ್ಣ ನಾಗಲಮಡಿಕ್ಕೆ ಗ್ರಾಮದವರು ಪಡೆದುಕೊಂಡರು,

ನಂತರ ಜಾತ್ರೆಗೆ ಬರುವ ವಾಹನಗಳ ಮೇಲೆ ವಿಧಿಸುವ ಸುಂಕ ವಸೂಲಿಯ ಹಕ್ಕನ್ನು ಹರಾಜಿನ ಮೂಲಕ ಮಲ್ಲರೆಡ್ಡಿ S/o ಸುಬ್ಬಾರೆಡ್ಡಿ ನಾಗಲಮಡಿಕೆ ಗ್ರಾಮದವರು ಪಡೆದುಕೊಂಡರು.

ಜಾತ್ರೆಗೆ ಆಗಮಿಸುವ ಜಾನುವಾರುಗಳ ಗೊಬ್ಬರದ ಹಕ್ಕನ್ನು ನಾಗಲಾಪುರದ ಗೋವಿಂದಪ್ಪ ರವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಡೆದುಕೊಂಡರು.

ಈ ವೇಳೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಪ್ರಸಾದ್, ನಾಗಲಮಡಿಕೆ ಹೋಬಳಿಯ ವೃತ್ತ ನಿರೀಕ್ಷಕರಾದ ಕೆ.ವಿ.ನಾರಾಯಣ, ತಿರಮಣಿ ಗ್ರಾಮ ಆಡಳಿತಾಧಿಕಾರಿ ರವಿಕುಮಾರ್, ನಾಗಲಮಡಿಕೆ ಆಡಳಿತಾಧಿಕಾರಿ ಮಧು,ಮಜುರಾಯಿ ಇಲಾಖೆಯ ಗುಮಾಸ್ತ ತಿಮ್ಮಾರೆಡ್ಡಿ, ಸಕಾಲ ಕಂಪ್ಯೂಟರ್ ಆಪರೇಟರ್ ರವಿ,ಗ್ರಾಮ ಸಹಾಯಕ ರವಿ, ಮುಜರಾಯಿ ಇಲಾಖೆಯ ಪಾರುಪತ್ತೆದಾರರಾದ ಉಮಾಶಂಕರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ವರದಿ:ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!