ಸೇಡಂ:ತಾಲೂಕಿನ ಲಿಂಗಂಪಲ್ಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಗುಂಡೇಪಲ್ಲಿ ಕೆ ಗ್ರಾಮದ ಕಲಬುರಗಿ – ಹೈದರಾಬಾದ್ ಮುಖ್ಯ ರಸ್ತೆ ಮುಧೋಳ ಕ್ರಾಸ್ ಸಮೀಪ ಇರುವ ಧಾನ್ಯಲಕ್ಷ್ಮೀ ಇಂಡಸ್ಟ್ರೀಸ್ ರೈಸ್ ಮಿಲ್ ನಿಂದ ಬರುವ ದೂಳು ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಹಾದಿಬರುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಸದರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ಅಧಿಕಾರಿಗಳ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿಸಿರುತ್ತಾರೆ.

ರೈಸ್ ಮಿಲ್ ನಿಂದ ಬರುವ ದೂಳಿನಿಂದ ಮುಖ್ಯರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಮತ್ತು ಸುತ್ತಲಿನ ಮನೆಗಳ ಅಂಗಳದೊಳೆಗೇ ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಆದ ಕಾರಣ ಸದರಿ ರೈಸ್ ಮಿಲ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ತಾಲೂಕ ದಂಡಾಧಿಕಾರಿಗಳಾದ ಶ್ರೇಯಾಂಕ ಧನುಶ್ರೀ ಅವರಿಗೆ ಗುಂಡೇಪಲ್ಲಿ ಮತ್ತು ಮುಧೋಳ ಸಾರ್ವಜನಿಕರು ಮನವಿ ಸಲ್ಲಿಸಿದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




