ಯಳಂದೂರು : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಮಾಜಿ ಸಂಸದ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಡಿಕೆ ಸುರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗುಂಬಳ್ಳಿ ಗ್ರಾಮದ ಯುವ ಮುಖಂಡ ಹಾಗೂ ಡಿಕೆ ಸುರೇಶ್ ಅವರ ಅಪ್ಪಟ ಅಭಿಮಾನಿಯಾದ ಪವನ್ ಗೌಡ ಅವರು ಶಾಲೆಗೆ ಫಿಲ್ಟರ್ ವಾಟರ್ ನೀಡಿದರು
ಈ ಸಂದರ್ಭದಲ್ಲಿ ಶಾಲೆಯ 130 ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ ಹಾಗೂ ಸಿಹಿ ವಿತರಣೆ ಮಾಡಲಾಗಿದ್ದು, ಮಕ್ಕಳಲ್ಲಿ ಸಂತಸ ಮೂಡಿತು. ಶಿಕ್ಷಣದ ಮಹತ್ವವನ್ನು ಮನಗಂಡು ಈ ರೀತಿಯ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸುವುದು ಶ್ಲಾಘನೀಯ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ನಂತರ ಮಾತನಾಡಿದ ಪವನ್ ಗೌಡ ಅವರು, ಡಿಕೆ ಸುರೇಶ್ ಅವರ ಸಾಮಾಜಿಕ ಸೇವೆ, ಜನಪರ ಹೋರಾಟಗಳು ಹಾಗೂ ವಿದ್ಯಾರ್ಥಿ ಸ್ನೇಹಿ ಚಿಂತನೆಗಳ ಕುರಿತು ವಿವರಿಸಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದು ಪ್ರೇರಣಾತ್ಮಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರುಗಳಾದ ಮಹದೇವಸ್ವಾಮಿ, ವೀರಭದ್ರಸ್ವಾಮಿ, ಶಾರದ, ಅಭಿಮಾನಿಗಳಾದ ಕೆಂಪಚಾರಿ, ಶ್ರೀನಿವಾಸ್ ಗೌಡ, ಜೀವನ್ ಗೌಡ, ರಕ್ಷಿತ್ ಗೌಡ, ಪತ್ರಕರ್ತರಾದ ನಾಗೇಂದ್ರ, ನಾಗರಾಜು ಹಾಗೂ ಮಕ್ಕಳು ಚಾಮರಾಜನಗರ ಜಿಲ್ಲಾ ನಾಮಿನಿ ಕೌನ್ಸಿಲರ್ ಜುಬೀರ್ ಉಲ್ಲಾ ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




