Ad imageAd image

ಚರಂಡಿಯಲ್ಲಿ ನೀರು ಹಿಡಿದುಕೊಳ್ಳವ ಅನಿವಾರ್ಯತೆ

Bharath Vaibhav
ಚರಂಡಿಯಲ್ಲಿ ನೀರು ಹಿಡಿದುಕೊಳ್ಳವ ಅನಿವಾರ್ಯತೆ
WhatsApp Group Join Now
Telegram Group Join Now

ಹುಮನಾಬಾದ:ಹದಗೆಟ್ಟ ರಸ್ತೆ,ಗಬ್ಬು ನಾರುತ್ತಿರುವ ಚರಂಡಿಗಳು,ನೀರು ಚರಂಡಿಯಿಂದ ಹಿಡಿಕೊಳ್ಳುವ ಅನಿವಾರ್ಯತೆ ಗ್ರಾಮ ಒಂದರಲ್ಲಿ ಎದ್ದು ಕಾಣುತ್ತಿದೆ.

ಇದು ಎಲ್ಲಿ ಅಂತೀರಾ,ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಮದರವಾಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಗೆ ಒಳಪಡುವ ಮಲ್ಕಾಪುರ್ ವಾಡಿ ಗ್ರಾಮದ ಕಥೆಯಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರ ಸ್ವಂತ ಗ್ರಾಮದಲ್ಲೇ ಇಂತಹ ಸ್ಥಿತಿ ಇರುವಾಗ ಇನ್ನೂ ಬೇರೆ ಗ್ರಾಮಗಳ ಸ್ಥಿತಿ ಏನಿರಬಹುದು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಗ್ರಾಮದಲ್ಲಿ ಸಿಸಿ ರಸ್ತೆ,ಚರಂಡಿ,ಶುದ್ದ ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸೂಕ್ತ ಚರಂಡಿಗಳು ಇಲ್ಲ,ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ.ಇದರಿಂದ ಸೊಳ್ಳೆಗಳ ಕಾಟವೂ ಹೆಚ್ಚಳವಾಗಿದೆ.ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.

ಅಲ್ಲದೆ,ಗ್ರಾಮದಲ್ಲಿ ಮನೆ ಮನೆಗೆ ಸರಿಯಾಗಿ ನೀರು ಬರುತ್ತಿಲ್ಲ.ನಮ್ಮ ಮನೆಯ ಪಕ್ಕದಲ್ಲಿನ ಕುಡಿಸಿರುವ ನಲ್ಲಿಗಳು ಬಂದ್ ಆಗಿವೆ.ನಾವು ಕೊಲಿ ಕಾರ್ಮಿಕರು,ನಿತ್ಯ ಕೆಲಸಕ್ಕೆ ಹೋಗಬೇಕು.ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರಸ್ವತಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಚರಂಡಿ ಪಕ್ಕದಲ್ಲಿ ಪೈಪ್‌ಲೈನ್‌ಗೆ ಸ್ವಲ್ಪ ನೀರು ಬರುತ್ತವೆ,ಚರಂಡಿಯಲ್ಲಿ ಬಿಂದಿಗೆ ಕೊಡ ಇಟ್ಟುಕೊಂಡು ಅದೇ ನೀರು ತೆಗೆದುಕೊಳ್ಳುಬೇಕು.ಚರಂಡಿಯಲ್ಲಿ ತ್ಯಾಜ್ಯ ತುಂಬಿ ಗುಬ್ಬ ನಾರುತ್ತಿವೆ ನಮ್ಮ ಪರಿಸ್ಥಿತಿ ಕೇಳೋರು ಯಾರು ಇಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ ಮಷಿನ್ ಕಾಮಗಾರಿ ಉಪಯೋಗಕ್ಕೆ ಬಾರದಂತಾಗಿದೆ. ಒಂದು ಬಡಾವಣೆಗೆ ನೀರು ಬಂದರೆ ಇದರ ಪಕ್ಕದ ಬಡಾವಣೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ.ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಸಮರ್ಕವಾಗಿ ನೀರು ಬರುತ್ತಿಲ್ಲ.ನೀರಿಗಾಗಿ ಕಿಲೋ ಮೀಟರ್ ದೊರ ಅಲಿಯಬೇಕಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ಸಮಸ್ಯೆ ಇರುವ ಮಲ್ಕಾಪುರ್ ವಾಡಿ ಗ್ರಾಮಕ್ಕೆ ಅಧಿಕಾರಿಗಳು,ಜನಪ್ರತಿನಿದಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ:ಸಜೀಶ್ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!