ಸಿಂಧನೂರು : ಡಿ.19, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಮಿತಿಯ ಜಿಲ್ಲಾಧ್ಯಕ್ಷರಾದ ರವಿ ನಾಯಕ ಮಾಕಾಪುರ ಹಾಗೂ ಜಿಲ್ಲಾ ಕಾರ್ಯಧ್ಯಕ್ಷರಾದ ಶಿವರಾಯ ನಾಯಕ ಯಮನಾಳ ರವರ ನೇತೃತ್ವದಲ್ಲಿ ವೀರಗೊಟ ಮೌನೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಮಸ್ಕಿ ತಾಲೂಕ ಅಧ್ಯಕ್ಷರಾಗಿ ಶರಣಪ್ಪ ನಾಯಕ ನಾಗರಾಳ, ಜಿಲ್ಲಾ ಗೌರವ ಸಲಹೆಗಾಗಿ ನರಸಣ್ಣ ವಿ. ಚಂಪಾ ನಾಯಕ, ಜಿಲ್ಲೆ ಉಪಾಧ್ಯಕ್ಷರಾಗಿ ಶಿವರಾಜ ನಾಯಕ ಗೌಡುರು, ಸಿಂಧನೂರು ತಾಲೂಕ ಅಧ್ಯಕ್ಷರಾಗಿ ರವೀಂದ್ರ ನಾಯಕ ದುಮತಿ, ಲಿಂಗಸುಗೂರು ತಾಲೂಕ ಅಧ್ಯಕ್ಷರಾಗಿ ರಮೇಶ್ ನಾಯಕ ರವರನ್ನು ನೇಮಿಸಿ ಆದೇಶ ಪ್ರತಿಗಳನ್ನು ನೀಡಿ
ಸಮಾಜದ ಅಭಿವೃದ್ಧಿಗೆ ದೀನ ದಲಿತರ ನೆರವಿಗೆ ಧಾವಿಸಿ ನ್ಯಾಯ ಒದಗಿಸಲು ನಿರಂತರವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧ್ಯಕ್ಷ ರವಿ ನಾಯಕ ಸಲಹೆ ನೀಡಿದರು.
ವರದಿ : ಬಸವರಾಜ ಬುಕ್ಕನಹಟ್ಟಿ




