ಜೋಯಿಡಾ : ತಾಲೂಕಾ ಕೇಂದ್ರ ಜೋಯಿಡಾದಲ್ಲಿನ ಹೋಲಿ ಫೆಮಿಲಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳ ವಾರ್ಷಿಕೋತ್ಸವದ ಹಾಗೂ ಕ್ರಿಸ್ಮಸ್ ಸ್ವಾಗತ ಕಾರ್ಯಕ್ರಮ ಇಂದು ಮಧ್ಯಾಹ್ನ 5 ಗಂಟೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೋಯಿಡಾ ಹೋಲಿ ಫೆಮಿಲಿ ಚರ್ಚ್ ಫಾದರ್ ಸ್ಟಿಪನ್ ಡಿಸೋಜಾ, ಮುಗ್ದ ಮಕ್ಕಳ ನೃತ್ಯ ಪ್ರತಿಭೆ ಅತ್ಯೂತ್ತಮವಾಗಿ ಮೂಡಿ ಬಂದಿದೆ. . ನಮ್ಮ ಪ್ರೌಡಶಾಲೆಯ ವಿದ್ಯಾರ್ಥಿಗಳು ಎಸ್. ಎಸ್. ಎಲ್, ಸಿಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು, ಶಿಕ್ಷಕರ ಪ್ರಯತ್ನ ಹಾಗೂ ಮಕ್ಕಳ ಸಾಧನೆಗೆ ಅಭಿನಂದಿಸುತ್ತೆನೆ. ಪ್ರತಿಭೆಯನ್ನು ಗುರುತಿಸಿ ಕಾರ್ಯಕ್ರಮನ್ನು ಚಂದಗಾಣಿಸಿದ್ದಿರಿ. ಮುಂದೆಯೂ ಕೂಡಾ ನಮ್ಮ ಶಾಲೆ ಉತ್ತಮ ಸಾಧನೆ ಮಾಡುವಂತಾಗಲಿ ಏಂದು ಹಾರೈಸಿದರು. ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಮೇಶ ನಾಯ್ಕ ನೆರವೇರಿಸಿ ಸುಭಕೋರಿದರು.
ಶಾಲಾ ಮುಖ್ಯೋಪಾದ್ಯಾಪಕಿ ಸಿಸ್ಟರ್ ಶ್ಯಾಮಲಾ, ಶಾಲಾ ಶೈಕ್ಷಣಿಕ ಪ್ರಗತಿ, ಮಕ್ಕಳ ಸಾಧನೆ ಹಾಗೂ ಶಾಲೆ ಶೈಕ್ಷಣಿಕ ಚಟುವಟಿಕೆ ಕುರಿತು ವರದಿ ವಾಚನ ಮಾಡಿ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕ ಟೊನಿ ಡಿಸೋಜಾ ನೇತೖತ್ವದಲ್ಲಿ ಅತಿಥಿಗಳನ್ನು ಶಾಲಾ ಮಕ್ಕಳು ಬ್ಯಾಂಡ್ ಬಾರಿಸಿ ಪಥಸಂಚಲನದ ನಡೆಸಿ ಗೌರವ ಪೂರ್ವಕವಾಗಿ ವೇದಿಕೆಗೆ ಕರೆತರಲಾಯಿತು.
ಶಾಲಾಮಕ್ಕಳಿಂದ ವಿವಿಧ ನೃತ್ಯ ಸ್ಪರ್ಧೆಗಳು ನಡೆದವು, ಮುಗ್ದ ಮಕ್ಕಳ ಮನಮೊಹಕ ನೃತ್ಯ ನೆರೆದಿದ್ದ ಪಾಲಕರ ಮನಸೊರೆಗೊಂಡಿತ್ತು.
ಕಳೆದ ಮೂರು ವರ್ಷದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಹೊಲಿ ಫೆಮಿಲಿ ಪ್ರೌಢಶಾಲೆ ಅಧ್ಯಕ್ಷ ಹಾಗೂ ಗ್ರಾ. ಪಂ. ಉಪಾದ್ಯಕ್ಷ ಸಂತೋಷ ಮಂಥೇರೊ, ನೌಕರರ ಸಂಘದ ಅಧ್ಯಕ್ಷ ಎಸ್. ಆರ್. ಸಾಳುಂಕೆ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ದೈ. ಶಿ. ಪ. ವಿಜಯಲಕ್ಷಿ ಹಂಚಿ, ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಸ್ಟೇಲ್ಲಾ, ಮುತಾದವರು ಉಪಸ್ಥಿತರಿದ್ದರು.




