ಬೃಹತ್ ಮೊತ್ತದತ್ತ ಪಾಕಿಸ್ತಾನ ತಂಡ
ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ (೧೯ ರ‍್ಷದೊಳಗಿನವರ) ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಫೈನಲ್ ಪಂದ್ಯ ಇಲ್ಲಿನ ಐಸಿಸಿ ಆಕಾಡೆಮಿ ಮೈದಾನದಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನ ೩೦.೧ ಓವರುಗಳಲ್ಲಿ ೨ ವಿಕೆಟ್‌ಗೆ ೨೦೭ ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಸಾಗಿದೆ.
ಕಿರಿಯರ ಏಶಿಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಕಿರಿಯರ ತಂಡವು ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಸ್ಕೋರ್ ವಿವರ;
ಪಾಕಿಸ್ತಾನ ೩೦.೧ ಓವರುಗಳಲ್ಲಿ ೨ ವಿಕೆಟ್‌ಗೆ ೨೦೭
ಸಮೀರ್ ಮಿನ್ಹಾಸ್ ಬ್ಯಾಟಿಂಗ್ ೧೧೬ ( ೭೯ ಎಸೆತ, ೧೩ ಬೌಂಡರಿ, ೫ ಸಿಕ್ಸರ್)
ಅಹ್ಮದ್ ಹುಸೇನ್ ಬ್ಯಾಟಿಂಗ್ ೩೬ ( ೪೮ ಎಸೆತ, ೨ ಬೌಂಡರಿ)
ಹೆನಿಲ್ ಪಟೇಲ್ ೨೨ ಕ್ಕೆ ೧




