ಮುಂಬೈ: ಮುಂದಿನ ರ್ಷದಲ್ಲಿ ನಡೆಯಲಿರುವ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್- ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ಅವರನ್ನು ತಂಡದಿAದ ಕೈ ಬಿಟ್ಟ ವಿಚಾರ ಕ್ರಿಕೆಟ್ ವಲಯದಲ್ಲಿ ರ್ಚೆಗೆ ಕಾರಣವಾಗಿದೆ.
ಶನಿವಾರ ತಂಡವನ್ನು ಪ್ರಕಟಿಸಲಾಗಿದ್ದು, ಶುಭಮಾನ್ ಗಿಲ್ ಕೈಬಿಟ್ಟಿ ವಿಷಯ ಬಿಟ್ಟರೆ ಉಳಿದೆಲ್ಲವೂ ನಿರೀಕ್ಷಿತ ತಂಡವೇ ಆಗಿದೆ. ಅಭಿಷೇಕ ರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಗಿಲ್ ಈಗ ಚುಟುಕು ಪಂದ್ಯದಲ್ಲಿ ಇಲ್ಲದಿರುವುದು ರ್ಚೆಗೆ ಗ್ರಾಸವಾಗಿದ್ದು, ಮಾಜಿ ಆಟಗಾರರು ಆಯ್ಕೆಗಾರರ ತರ್ಮಾನವನ್ನು ವಿಶ್ಲೇಷಿಸಿದ್ದಾರೆ.
ಅಭಿಷೇಕ ರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲು ಆಯ್ಕೆಗಾರರು ಎರಡು ಆಯ್ಕೆಗಳನ್ನು ನೋಡಿಕೊಂಡಿದ್ದು, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಿದ್ದಾರೆ. ಈ ಇಬ್ಬರ ಪೈಕಿ ಒಬ್ಬರನ್ನು ಅಭಿಷೇಕ ರ್ಮಾ ಜೊತೆ ಇನ್ನಿಂಗ್ಸ್ ಆರಂಭ ಮಾಡಲು ಕಳಿಸುವ ಸಾಧ್ಯತೆ ಇದೆ.
ಬಿರುಸಿನ ಆಟಗಾರ ರಿಂಕು ಸಿಂಗ್ ಗೆ ಸ್ಥಾನ ಕೊಟ್ಟಿರುವ ಕಾರಣ ಶುಭಮಾನ್ ಗಿಲ್ ಅವರನ್ನು ತಂಡದಿAದ ಕೈ ಬಿಡಬೇಕಾಗಿ ಬಂದಿರಬಹುದು ಎಂಬುದು ಮೇಲ್ನೊಟಕ್ಕೆ ಗೊತ್ತಾಗುತ್ತದೆ. ಏತನ್ಮಧ್ಯೆ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ರ್ಜರಿ ಯಶಸ್ಸು ಕಂಡಿರುವ ಶುಭಮಾನ್ ಗಿಲ್ ಅವರನ್ನು ಕೈ ಬಿಟ್ಟಿರುವುದು ಅಚ್ಛರಿ ತಂದಿದೆಯಾದರೂ ಚುಟುಕು ಪಂದ್ಯಕ್ಕೆ ಕೈ ಬಿಟ್ಟಿರುವುದರಿಂದ ಹಾಗೂ ಉಳಿದ ತಂಡ ಸಮತೋಲನದಿಂದ ಕೂಡಿರುವ ವಿಚಾರದಿಂದ ಆಯ್ಕೆಗಾರರ ತರ್ಮಾನ ಸರಿ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.
ಆಯ್ಕೆಗಾರರ ದಿಟ್ಟ ನಿಲುವು




