ಸೇಡಂ: ತಾಲೂಕಿನ ಸಿಲಾರಕೋಟ್ ಗ್ರಾಮದ ಸುಮಾರು 4500ಎಕರೆ ಭೂಮಿ ಇದ್ದು ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಭೂಮಿಯಲ್ಲಿ ರೈತರು ಬೆಳೆದಿರುವ ತೊಗರಿ ಬೇಳೆಗೆ ಗೊಡ್ಡು ರೋಗ ಬಂದು ರೈತರು ಕಂಗಾಲಾಗಿದ್ದಾರೆ.
ಓಬೊಬ್ಬ ರೈತರ ಭೂಮಿ 3ಎಕರೆಗಿಂತ ಹೆಚ್ಚು ಭೂಮಿಯಲ್ಲಿ ರೈತರು ತೊಗರಿ ಬೇಳೆ ಬೆಳೆದಿದ್ದು ಮೂರರಿಂದ ನಾಲ್ಕು ಬಾರಿ ಔಷಧಿ ಸಿಂಪರಣೆ ಕೂಡ ಮಾಡಿದ್ದಾರೆ ಆದರೆ ಯಾವುದೇ ಪ್ರಯೋಜನವಿಲ್ಲದೆ ಬೇಳೆ ಸಂಪೂರ್ಣ ಹಾಳಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದೀಗ ಸರಕಾರವು ರೈತರಿಗೆ ನೀಡಿರುವ ಬೆಳೆಹಾನಿ ಪರಿಹಾರವು ಕನಿಷ್ಠ ಅವರು ತಂದಿರುವ ಔಷಧಿ ಖರ್ಚಿಗೆ ಕೂಡ ಸಾಲುತ್ತಿಲ್ಲ ಅದರಲ್ಲೂ ಕೆಲವು ರೈತರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.
ಸಿಲಾರಕೋಟ್ ಗ್ರಾಮದ ರೈತರ ಸಂಕಷ್ಟಕ್ಕೆ ಸರಕಾರವು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸುಮಾರು ಒಂದು ಎಕರೆಗೆ 25000ಸಾವಿರ ರೂಪಾಯಿ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಭೀಮಪ್ಪ ಪೊಟ್ಟಿ ಅವರು ಮಾತನಾಡಿ ಈ ಭಾಗದ ರೈತರು ತೊಗರಿ ಬೇಳೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ರೈತರಪಾಲಿಗೆ ದೈವಸ್ವರೂಪಿಯಾಗಿರುವ ತೊಗರಿ ಬೆಳೆಯು ಈ ವರ್ಷ ಅತಿಯಾದ ಮಳೆಯಿಂದ ಗೊಡ್ಡು ರೋಗ ಬಂದು ಒಬ್ಬೊಬ್ಬ ರೈತ ಸುಮಾರು 5ಎಕರೆಗಿಂತ ಹೆಚ್ಚು ತೊಗರಿ ಬೇಳೆ ಬೆಳೆದಿದ್ದು ಮೂರರಿಂದ ನಾಲ್ಕು ಬಾರಿ ಔಷಧಿ ಸಿಂಪರಣೆ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೊಂದ ರೈತರಿಗೆ ಸರಿಯಾದ ಪರಿಹಾರ ನೀಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀನಿವಾಸ್ ಪೊಟ್ಟಿ, ಭೀಮಪ್ಪ ಪೊಟ್ಟಿ, ಪ್ರವೀಣ್ ಕಲಾಲ್, ನರೇಶ್ ರೆಡ್ಡಿ ಅಬ್ಬನಿ, ಸಾಯಿಲು ಪೂಜಾರಿ, ಶಿರಿಷ್ ರೆಡ್ಡಿ, ಸುರೇಂದ್ರ ಕಲಾಲ್, ಚಿನ್ನ ಬಾಲಯ್ಯಾ ತಲಾರಿ ಸೇರಿದಂತೆ ಇನ್ನಿತರರು ರೈತ ಮುಖಂಡರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




