ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಸಿಕ್ಕಸಿಕ್ಕ ವಾಹನಗಳಿಗೆ ಕಂಟೇನರ್ ವಾಹನ ಡಿಕ್ಕಿ ಹೊಡೆದಿದೆ.
ಇಪ್ಪತ್ತಕ್ಕೂ ಹೆಚ್ಚು ವಾಹನಗಳಿಗೆ ಕಂಟೇನರ್ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆನೇಕಲ್ ಸಮೀಪದ ಬೆಸ್ತಮಾನ ಹಳ್ಳಿಯಿಂದ ಚಂದಾಪುರದವರೆಗೆ ಅಪಘಾತ ಸಂಭವಿಸಿದೆ. ಪೊಲೀಸರು 14 ಕಿಲೋ ಮೀಟರ್ ಹಿಂಬಾಲಿಸಿದರೂ ಕಂಟೇನರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಾಟ ನಡೆಸಿದಾಗ ಚಾಲಕ ಕಂಟೇನರ್ ನಿಲ್ಲಿಸಿದ್ದಾನೆ. ಚಾಲಕನನ್ನು ಹೊರಗೆಳೆದು ಸಾರ್ವಜನಿಕರು ಥಳಿಸಿದ್ದಾರೆ.
ಪೊಲೀಸರು ಮಧ್ಯ ಪ್ರವೇಶಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕುಡಿದ ನಶೆಯಲ್ಲಿ ಕಂಟೇನರ್ ಚಾಲಕ ಭೀಕರ ಸರಣಿ ಅಪಘಾತ ನಡೆಸಿದ್ದಾನೆ/ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.




