ಸುಪ್ರೀಂ ನ್ಯಾ.ಪ್ರಸನ್ನ ವರಾಳೆ ಅಭಿಮತ ನೊಂದವರಿಗೆ ನ್ಯಾಯದಾನ ಸಂವಿಧಾನದ ಉದ್ದೇಶ
ಚಿಕ್ಕೋಡಿ :ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಬಗ್ಗೆ ಭಾವುಕರಾದರು.
ಡಾ.ಬಾಬಾಸಾಹೇಬರು ಮತ್ತು ಕುಟುಂಬದ ನಡುವೆ ಉತ್ತಮವಾದ ಬಾಂಧವ್ಯವಿತ್ತು. ಚಿಕ್ಕೋಡಿ ನ್ಯಾಯಾಲಯದಲ್ಲಿನ ವ್ಯಾಜ್ಯಕ್ಕೆ ಮಾಡುವಂತೆ ನಮ್ಮ ತಂದೆಯವರು ಅಂಬೇಡ್ಕರರಿಗೆ ಮನವಿ ಮಾಡಿದ್ದರು. ಇದೀಗ ನ್ಯಾಯಾಲಯದಲ್ಲಿ ಅವರ ಭಿತ್ತಿ ಚಿತ್ರ ಅನಾವರಣ ಮಾಡುವ ಭಾಗ್ಯ ನನಗೆ ದೊರಕಿರುವುದು ಸೌಭಾಗ್ಯ ಎಂದು ಹೇಳಿ ಆನಂದ ಭಾಷ್ಪ ಹಾಕಿದರು.
ಚಿಕ್ಕೋಡಿಯಲ್ಲಿ ನೂತನ ನ್ಯಾಯಾಲಯ ಕಟ್ಟಡವನ್ನು ಸುಪ್ರಿಂ ಕೋರ್ಟ ನ್ಯಾಯಮೂರ್ತಿ ಪ್ರಸನ್ನ ವರಾಳೆ ಉದ್ಘಾಟಿಸಿದರು.
ಚಿಕ್ಕೋಡಿ: ನಮ್ಮ ದೇಶಕ್ಕೆ ಸಂವಿಧಾನವೇ ಉನ್ನತವಾಗಿದೆ. ಸಂವಿಧಾನ ತು ರ ತತ್ವ ಪಾಲನೆ ಮಾಡುತ್ತ ದೇಶದ ಸಂವಿಧಾನದ ಅನುಸಾರ ನಡೆಯಬೇಕಾದೆ ಅವಶ್ಯಕತೆಯಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಂಗ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾಸಾಹೇಬರು ಸಂವಿಧಾನ ರಚನೆ ಮಾಡಿರುವ ಉದ್ದೇಶ ಜಾತಿ ವ್ಯವಸ್ಥೆ ದೂರವಾಗಬೇಕೆಂಬ ಆಶಯವಾಗಿದೆ ಎಂದರು.
ದೇಶದಲ್ಲಿ ಜಾತಿ-ಬೇಧ ದೂರವಾಗದೆ ಇದ್ದರೆ ಬಂಧುತ್ವ ದೇಶದಲ್ಲಿ ಬರುವುದಿಲ್ಲ. ಇದರಿಂದಾಗಿ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ.
ಬಂಧುತ್ವ ಇಲ್ಲದೆ ಹೋದಲ್ಲಿ ಸ್ವಾತಂತ್ರ್ಯ ಸಮಾನತೆ ಅನ್ನುವುದು ಗೋಡೆಗಳ ಮೇಲೆ ಇರುವ ಬಣ್ಣದಂತಾಗುತ್ತದೆ ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ ಹೇಳುತ್ತಿದ್ದರು. ನೊಂದವರಿಗೆ ನ್ಯಾಯ ನೀಡುವುದು ಸಂವಿಧಾನದ ಮೂಲ ಉದ್ದೇಶ ಎಂದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮಾತನಾಡಿ, ಇಲ್ಲಿನ ನ್ಯಾಯಾಲಯವು ಐತಿಹಾಸಿಕತೆ ಹೊಂದಿದೆ. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ನ್ಯಾಯಾಧೀಶರು ಸಕಾಲದಲ್ಲಿ ನ್ಯಾಯ ನೀಡುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಕಾನೂನು ನ್ಯಾಯ ಮಾನವ ಹಕ್ಕುಗಳು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇಲ್ಲಿನ ನ್ಯಾಯಾಲಯದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ವಾದ ಮಾಡಿರುವುದರಿಂದ ಐತಿಹಾಸಕತೆ ಹೊಂದಿದೆ ಎಂದು ಹೇಳಿದರು.
ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಹೈಕೋರ್ಟ ಕೆ.ಎಸ್. ಕೆ.ಎಸ್. ಪಾಟೀಲ, ನ್ಯಾಯಮೂರ್ತಿಗಳಾದ ಶ್ರೀಮತಿ ಮುದ್ದಲ್, ಸಚಿನ ಮಗದುಮ್ಮ, ಹೇಮಲೇಖಾ, ವಿಜಯಕುಮಾರ ವಕೀಲರ ಪರಿಷತ್ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿದರು.
ಶಾಸಕ ಗಣೇಶ ಹುಕ್ಕೇರಿ ಹಾಗೂ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ, ಹರೀಶಗೌಡ ಪಾಟೀಲ, ತೃಪ್ತಿ ಧರಣಿ, ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತಕುಮಾರ, ರಾಜ್ಯ ವಕೀಲರ ಸಂಘದ ಉಪಾಧ್ಯಕ್ಷ ರಾಜು ಖೋತ, ವಕೀಲರ ಸಂಘದ ಕಾರ್ಯದರ್ಶಿ ರಮೇಶ ಹಿತ್ತಲಮನಿ, ರಮೇಶ ಕಾಳನ್ನವರ, ಧಾರವಾಡ ಉತ್ತರ ವಲಯದ ಲೋಕೊಪಯೋಗಿ ಇಲಾಖೆ ಮುಖ್ಯ ಅಭಿಯಂತ ಶಿವಾನಂದ ನಾಯ್ಕ ಉಪಸ್ಥಿತರಿದ್ದರು.
ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಸಂವಿಧಾನ ಸಭೆಗೆ ಭಾರತದ ಸಂವಿಧಾನ ಹಸ್ತಾಂತರಿಸುವ ಚಿತ್ರವನ್ನು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅನಾವರಣ ಮಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಮಂಜುನಾಥ ನಾಯಿಕ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಕಲ್ಮಶ ಕಿವಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಎಂ.ಬಿ. ಪಾಟೀಲ ನಿರೂಪಿಸಿದರು.
ವರದಿ: ರಾಜು ಮುಂಡೆ




