ಬೆಂಗಳೂರು : ನೂತನ ವರ್ಷದ ಕ್ಯಾಲೆಂಡರ್ ವಿಶೇಷತೆ ಎಂದರೆ ಅದು ಸಮಯದ ಗಣಿತ, ಸಂಪ್ರದಾಯ ಮತ್ತು ಖಗೋಳಶಾಸ್ತ್ರದ ಸಂಯೋಜನೆಯಾಗಿದ್ದು, ಗ್ರೆಗೋರಿಯನ್ ಕ್ಯಾಲೆಂಡರ್ ಜನವರಿ 1ರಂದು ಪ್ರಾರಂಭವಾಗುತ್ತದೆ ಎಂದು ಸಮಾಜ ಸೇವಕ ಚಿಂತಕರು ವಾಗ್ಮಿಗಳು ಮತ್ತು ಬುದ್ದಿಜೀವಿಗಳಾದ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.

ಅವರು ಚಿಕ್ಕಬಾಣವಾರದ ವೀರ ಶೈವ ಲಿಂಗಾಯತ ಸಮಾಜ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ ಎಚ್ ಪಾಟೀಲ್ ಅವರ ಕಚೇರಿಯಲ್ಲಿ ಆಯೋಜಿಸಿದ್ದ ನೂತನ ವರ್ಷದ 2026ನೇ ಸಾಲಿನ ಕ್ಯಾಲೆಂಡರ್ (ತುಗೂ ಪಂಚಾಂಗ) ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು
ಇದು ರೋಮನ್ ದೇವತೆ ‘ಜಾನುಸ್’ ಮತ್ತು ಭೂಮಿಯ ಸೌರ ಚಲನೆಯನ್ನು ಆಧರಿಸಿದೆ, ಆದರೆ ಪ್ರಾದೇಶಿಕವಾಗಿ ಭಾರತದಲ್ಲಿ ಯುಗಾದಿ, ಸಂಕ್ರಾಂತಿಗಳು, ದೀಪಾವಳಿ, ಇಸ್ಲಾಮಿಕ್ ಮತ್ತು ಚೈನೀಸ್ ಹೊಸ ವರ್ಷದಂತಹ ವಿಭಿನ್ನ ದಿನಾಂಕಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಪಂಚಾಂಗದ ಮಾಹಿತಿ, ಶುಭ-ಅಶುಭ ದಿನಗಳನ್ನು ತಿಳಿಯಲು ಸಹ ಕ್ಯಾಲೆಂಡರ್ ಮುಖ್ಯವಾಗಿದೆ ಎಂದು ಡಾ. ಬಿರಾದಾರ್ ಸಲಹೆ ನೀಡಿದರು.

ಚಿಕ್ಕಬಾಣವಾರದ ವೀರ ಶೈವ ಲಿಂಗಾಯತ ಸಮಾಜ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ ಎಚ್ ಪಾಟೀಲ್ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜನವಿಕಾಸ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ದಯಾನಂದ್, ರವಿಕುಮಾರ್, ಕಾಂತರಾಜ್, ಸಿ ಎಸ್ ಆರಾಧ್ಯ, ವಿರುಪಾಕ್ಷಪ್ಪ ಹಟ್ಟಿ, ತ್ಯಾಗರಾಜ, ಭಗವತ್, ಅಶೋಕ್ ಪಾಟೀಲ್, ಶಿವಕುಮಾರ್ ಮೇಟಿ ಮತ್ತು ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರು ಪದಾಧಿಕಾರಿಗಳು ಸಮಾಜದ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




