ಸೇಡಂ : ತಾಲೂಕಿನ ಯಾನಗುಂಧಿ ಮಹಾಯೋಗಿನಿ ಶ್ರೀ ಮಾತಮಾಣಿಕೇಶ್ವರಿ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀ ಶಿವಯ್ಯ ಸ್ವಾಮಿ ಅವರು ಈ ಹಿಂದೆ ನಡೆದ ಮೊತಕಪಲ್ಲಿ ಶ್ರೀ ಬಲಭೀಮಸೇನ ದೇವರ ಜಾತ್ರೆ ಮತ್ತು ತೆಲಂಗಾಣದ ಶ್ರೀ ಮಾನ್ಯಂಕೊಂಡ ಶ್ರೀ ವೆಂಕಟೇಶ್ವರ ಸ್ವಾಮಿ ಜಾತ್ರೆ ಸೇರಿದಂತೆ ಹಲವು ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಹಿಂದೂ ಧರ್ಮಕ್ಕೆ ದಕ್ಕೆಯುಂಟು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಇಂತಹ ಹೇಳಿಕೆ ನೀಡಿರುವ ಸ್ವಾಮೀಜಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೊಲಮಾಮಿಡಿ ಗ್ರಾಮದ ಮುಖಂಡರಾದ ರಾಘವೇಂದ್ರ ಇಂಜೆಲಿಕರ್ ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಮಹಾಯೋಗಿನಿ ಬೆಟ್ಟದ ಮೇಲೆ ಅನೇಕ ರೀತಿಯಲ್ಲಿ ಟ್ರಸ್ಟ್ ಗೆ ಬರುತ್ತಿರುವ ಸಹಾಯಧನ ದುರ್ಬಳಕೆ ಆಗುತ್ತಿದೆ ಅದರ ಕುರಿತು ಅದಿಕಾರಿಗಳು ತನಿಖೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




