Ad imageAd image

ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಗೋಕಾಕ,ಬೆಳಗಾವಿಯಲ್ಲಿ ಆಡಬೇಕು: ಸಚಿವ ಸತೀಶ ಜಾರಕಿಹೋಳಿ.

Bharath Vaibhav
ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಗೋಕಾಕ,ಬೆಳಗಾವಿಯಲ್ಲಿ ಆಡಬೇಕು: ಸಚಿವ ಸತೀಶ ಜಾರಕಿಹೋಳಿ.
WhatsApp Group Join Now
Telegram Group Join Now

ಗೋಕಾಕ  : ಹುಬ್ಬಳ್ಳಿ ಮತ್ತು ಬೆಂಗಳೂರಿಷ್ಟೆ ಗೋಕಾಕ ಮೈದಾನವು ಕೂಡ ಪ್ರಾಮುಖ್ಯತೆ ಹೊಂದಬೇಕೆಂದು ಗೋಕಾಕದಲ್ಲಿ ಪ್ರಾಯೋಗಿಕ ಕ್ರಿಕೇಟ ಮೈದಾನ ಮಾಡಿದ್ದೇವೆ. ಕೆ,ಎಸ್, ಸಿ,ಟಿ ಗಿಂತಲೂ ನಮ್ಮ ಮೈದಾನವು ಕೂಡ ಕಡಿಮೆ ಇಲ್ಲ ಅಂತ ತೊರಿಸಿದ್ದೇವೆ ಎಂದು ಲೊಕೊಪಯೋಗಿ ಸಚಿವ ಮತ್ತು ಬೆಳಗಾವಿ ಉಸ್ತುವಾರಿ ಸತೀಶ ಜಾರಕಿಹೋಳಿಯವರು ಗೋಕಾಕದ ವಾಲ್ಮೀಕಿ ಕ್ರೀಡಾಂಗದಣಲ್ಲಿ ದಿವಂಗತ ಲಕ್ಷ್ಮಣರಾವ್ ಜಾರಕಿಹೋಳಿ ಸ್ಮರಣಾರ್ಥ ನಡೆಯುವ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಅದರ ಜೊತೆಯಲ್ಲಿ ಬೆಳಗಾವಿಯಲ್ಲಿ 50 ಕೋಟಿ ರೂ ವೆಚ್ಚದಲ್ಲಿ ಮತ್ತೊಂದು ಕ್ರೀಡಾಂಗಣ ಮಾಡುತಿದ್ದೇವೆ. ಮೊದಲು ಕ್ರಿಕೆಟಗಷ್ಟೆ ಪ್ರಾಮುಖ್ಯತೆ ನೀಡುತಿದ್ದರು ಆದರೆ ಈಗ ಕ್ರಿಕೇಟ್ ಜೊತೆ ಇನ್ನೂಳಿದ ಕ್ರೀಡೆಗಳಲ್ಲಿ ಗೋಕಾಕದವರು ಬಾಗವಹಿಸಿದ್ದಾರೆ.

ಇನ್ನು ಮುಂದಿನ ದಿನಮಾನದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಗೋಕಾಕದ ಕ್ರೀಡಾಂಗಣದಲ್ಲಿ ಆಡಲಿ ಎಂದು ಹಾರೈಸಿದರು. ಹುಬ್ಬಳಿಯ ಕ್ರೀಡಾಂಗಣದಂತೆ ಮಾಡಲು ಈಗ ಕಾಲ ಕೂಡಿ ಬಂದಿದ್ದರಿಂದ ಬೆಳಗಾವಿಯಲ್ಲಿ ಎಕಕಾಲದಲ್ಲಿ ಐದಾರು ಕ್ರೀಡೆಗಳು ನಡೆಯುವ ಹಾಗೆ ಮಾಡಿದ್ದೇವೆಂದರು.

ಇನ್ನು ಮೈದಾನದಲ್ಲಿ ಸಹೋದರ ಮತ್ತು ವಿದಾನ ಪರಿಷತ ಸದಸ್ಯ ಲಖನ ಜಾರಕಿಹೋಳಿ ಇವರು ಬಾಲ ಹಾಕಿದಾಗ ಸಚಿವ ಸತೀಶ ಜಾರಕಿಹೋಳಿ ಇವರು ತಮ್ಮನ ಬಾಲನ್ನು ಬೌಂಡ್ರಿ ಹೊಡೆದಾಗ ಪ್ರೇಕ್ಷಕರು ಶಿಳ್ಳೆ ಹೊಡೆದು ಸಂತಸ ವ್ಯಕ್ತಪಡಿಸಿದರು.

ಸಚಿವ ಸತೀಶ ಜಾರಕಿಹೋಳಿ ಮತ್ತು ಎಮ್ ಎಲ್,ಸಿ, ಲಖನ್ ಜಾರಕಿಹೋಳಿ ಇವರು 13 ದಿನ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗವಹಿಸುವ ತಂಡಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ರಿಕೆಟ್ ಬೆಳೆಸಲು ಕೊಡುಗೆ ನೀಡುತ್ತಿರುವ ಕೀಶೊರ ಬಟ್, ಸಂಜಿವ ಚಿಪ್ಪಲಕಟ್ಟಿ, ಬಸವರಾಜ ಕಲ್ಯಾಣಶೆಟ್ಟಿ, ಜೈಶೀಲ ಶೆಟ್ಟಿ ಇವರಿಗೆ ಸಚಿವರು ಅಬಿನಂದಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ ನಿರ್ದೇಶ ಅಮರನಾಥ ಜಾರಕಿಹೋಳಿ, ರಾಹುಲ ಜಾರಕಿಹೋಳಿ,ಗೋಕಾಕ ತಹಸಿಲ್ದಾರ, ತಾಲೂಕಾ ವೈದ್ಯಾಧಿಕಾರಿ ಡಾ:ಅಂಟಿನ್, ಆದಿತ್ಯ ಜಾರಕಿಹೋಳಿ ಸೇರಿದಂತೆ ಇನ್ನೂಳಿದವರು ಸಾಥ ನೀಡಿದರು.

ವರದಿ  : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!