ಜೋಯಿಡಾ : ಜಗತ್ತು ನೈಸರ್ಗಿಕ ಆಹಾರದತ್ತ ವಾಲುತಿದೆ. ಈ ಸಂದರ್ಭದಲ್ಲಿ ನಮ್ಮ ಪಾರಂಪರಿಕ ಆಹಾರ ಪದ್ದತಿಯನ್ನು ಪುನರ್ ಸ್ಥಾಪಿಸುವುದು ಅತ್ಯಗತ್ಯವಿದೆ. ಜೋಯಿಡಾ ತಾಲೂಕು ನೈಸರ್ಗಿಕ ಆಹಾರ ಉತ್ಪನ್ನಗಳ ತವರೂರು, ಇಲ್ಲಿನ ಗಡ್ಡೆ ಗೆಣಸಿನ ಔಷಧಿಗುಣ, ಆರೋಗ್ಯಕರ ತತ್ವಗಳಿಂದಾಗಿ ಜಾಗತಿಕ ಮನ್ನಣೆ ದೊರೆತಿದ್ದು, ಮುಂದಿನ ದಿನದಲ್ಲಿ ಇದಕ್ಕೆ ಜಿ.ಐ. ಟೆಗ್ ದೊರೆಯುವ ಮೂಲಕ ಇಲ್ಲಿನ ಗೆಣಸು ಜೋಯಿಡಾ ತಾಲೂಕನ್ನು ಇಡಿ ಜಗತ್ತು ಗುರುತಿಸುವಂತೆ ಮಾಡಲಿದೆ ಎಂದು ಜೋಯಿಡಾ ಕಾಳಿ ಬ್ರಿಗೇಡ ಸಂಸ್ಥಾಪಕ ಅಧ್ಯಕ್ಷ, ಕಿಸಾನ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರವಿ ರೆಡ್ಕರ್ ಹೇಳಿದರು.
ಅವರು ಇಂದು ಬಿ. ಜಿ. ವಿ. ಎಸ್. ಪ. ಪೂ. ಕಾಲೇಜ ಜೋಯಿಡಾ ವಿದ್ಯಾರ್ಥಿಗಳು ಆಯೋಜಿಸಿದ ಆಹಾರ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಮಾತನಾಡಿ, ಭಾರತದ ಸಂಸ್ಕೃತಿಯೊಂದಿಗೆ ಆಹಾರ ಪದ್ದತಿ ಹಾಸುಹೊಕ್ಕಿದೆ. ಉತ್ತಮ ಸಮತೋಲಿತ ಆಹಾರ ಆರೋಗ್ಯಕರ ಜೀವನ್ನಕ್ಕೆ ದಾರಿಯಾಗಿದೆ. ಮಕ್ಕಳಲ್ಲಿ ನಮ್ಮ ಪ್ರಾಚೀನ ಭಾರತಿಯ ಆಹಾರ ಪದ್ದತಿ ರೂಡಿಸಬೇಕು, ಆರೋಗ್ಗಕರ ಬದುಕಿಗೆ ಆಹಾರದ ಮಹತ್ವ ತಿಳಿಸಬೇಕೆನ್ನುವ ಉದ್ದೇಶದಿಂದ ಮಕ್ಕಳ ಸಹಭಾಗಿತ್ವದಲ್ಲಿ ಆಹಾರ ಮೇಳ ಆಯೋಜಿಸಿದ್ದೇವೆ ಎಂದರು.

ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಹಾಗೂ ವಕೀಲಾರ ಸುನೀಲ ದೇಸಾಯಿ ಮಾತನಾಡುತ್ತಾ, ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಸಾಂಪ್ರದಾಯಿಕ, ನೈಸರ್ಗಿಕ ಆಹಾರಕ್ಕೆ ಹೆಚ್ಚು ಬೇಡಿಕೆ ಇದೆ. ಜೋಯಿಡಾ ತಾಲೂಕು ಸಾಂಪ್ರದಾಯಿಕ ಆಹಾರದ ತವರೂರು, ಇಲ್ಲಿನ ಪ್ರಕೃತಿದತ್ತ ಆಹಾರ ತಯಾರಿಕರಿಕೆ ಉತ್ತಮ ಉದ್ಯೋಗವಕಾಶಗಳಿವೆ. ಇದು ನಮ್ಮ ಬದುಕನ್ನು ಕಟ್ಟಿಕೊಡಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗ್ರಾ. ಪಂ. ಉಪಾಧ್ಯಕ ಸಂತೋಷ ಮಂಥೇರೊ, ಬಿ. ಜಿ. ವಿ. ಎಸ್. ಸ್ಥಳಿಯ ಸಮಿತಿ ಸದಸ್ಯರಾದ ವಿನಯ ದೇಸಾಯಿ, ದತ್ತಾರಾಮ ದೇಸಾಯಿ, ಸಮೀರ ಮುಜಾವರ್, ಗಣಪತಿ ದೇಸಾಯಿ, ಪಾಲಕರಾದ ಸುಭಾಷ ಗೌಡರ, ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಆಹಾರ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳ 12 ಆಹಾರ ಅಂಗಡಿಗಳು ಪಾಲ್ಗೊಂಡಿದ್ದು, ಸ್ಥಳಿಯ ಗಡ್ಡೆ ಗೆಣಸಿನ ಪಲ್ಯ, ಖರಿದ (ಚಿಪ್ಸ) ಪದಾರ್ಥಗಳು, ವಿವಿಧ ಬಗೆಯ ರುಚಿಕರ ಲಡ್ಡು, ದೋಸೆ, ಸ್ಥಳಿಯ ಭಾಕರಿ (ರೋಟಿ), ಪುರಿ ಬಾಜಿ, ಹಣ್ಣಿನ ಸಿಕರಣಿ, ಚಿರುಟ್ಟಿ, ಪಾನಿ ಪುರಿ, ಸರಬತ್ ಮುಂತಾದ ಹಲವು ಬಗೆಯ ತಿಂಡಿ ತಿನಿಸುಗಳನ್ನು ಇಡಲಾಗಿತ್ತು. ಆಹಾರ ಮೇಳಕ್ಕೆ ಬಂದ ಅತಿಥಿಗಳು, ಕಾಲೇಜಿನ ಸಿಬ್ಬಂದಿಗಳು, ಪಾಲಕರು, ಹಳೆಯ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು ಖರಿದಿಸಿ, ತಿಂದು ಖುಷಿ ಪಟ್ಟರು. ವಿವಿಧ ಬಗೆಯ ಖಾದ್ಯಗಳ ಈ ಮೇಳ ರುಚಿಕಟ್ಟಾದ ಹಾಗೂ ವಿಭಿನವಾದ ಸಾಂಪ್ರದಾಯಿಕ ಆಹಾರವಾಗಿದ್ದು ಎಲ್ಲರ ಮನ ಮೆಚ್ಚು ವಂತಾಗಿತ್ತು.




