ಸೇಡಂ: ದೀನ ದಲಿತರ ಮತ್ತು ಹಿಂದುಳಿದ,ಅಲ್ಪಸಂಖ್ಯಾತರಿಗೆ ತುಳಿತಕ್ಕೆ ಒಳಗಾದವರ ಹಾಗೂ ಸ್ವಾಭಿಮಾನಿ ದಲಿತರ ರಕ್ಷಣೆಗಾಗಿ ಉದಯವಾಗಿರುವ ಅಂಬೇಡ್ಕರ್ ಯುವ ಸೇನೆಯ ರಾಜ್ಯಧ್ಯಕ್ಷರಾದ ಶ್ರೀಮತಿ ಕೌಶಲ್ಯ ಹೆಚ್ ಕೋದಂಡರಾಮ್ ಹಾಗೂ ಕಲಬುರಗಿ ಜಿಲ್ಲೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಎ.ತಳಕೇರಿ ಮತ್ತು ಸೇಡಂ ತಾಲೂಕ ಅಧ್ಯಕ್ಷರು ಗೋಪಾಲ ನಾಟೇಕರ್ ಅವರ ಆದೇಶದ ಮೇರೆಗೆ ಯುವ ಉತ್ಸಾಹಿ ಸಮಾಜ ಸೇವಕ ಮತ್ತು ಹಿಂದೆ ಅನೇಕ ದಲಿತಪರ ಹೋರಾಟಗಳಲ್ಲಿ ಹೋರಾಡಿದ ಭೀಮು ಮಲ್ಕಪಲ್ಲಿ ಇವರನ್ನು ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಮತ್ತು ಉಪಾಧ್ಯಕ್ಷರಾಗಿ ಲಾಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಅವರನ್ನು ನೇಮಕ ಮಾಡಿ ಆದೇಶ ಹೊರಾಡಿಸಲಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರಾದ ಗೋಪಾಲ ಎಲ್ ನಾಟಿಕರ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಹಿಂದಿನಿಂದಲ್ಲೆ ತಮ್ಮ ಹುದ್ದೆಗೆ ಜವಬ್ದಾರಿಯಿಂದ ನಿಷ್ಠವಂತರಾಗಿ ಕಾರ್ಯನಿರ್ವಾಹಿಸಿಕೊಂಡು ಅಲ್ಲಿ ಇರುವಂತಹ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯಬದ್ಧವಾಗಿ ಹೋರಾಡಬೇಕು ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಪಾಲಿಸುತ್ತಾ ಮತ್ತು ಪ್ರಜಾ ಪ್ರಭುತ್ವದಲ್ಲಿ ಸಂವಿಧಾನಬದ್ದವಾಗಿ ಸ್ವಾಭಿಮಾನಿ ದಲಿತರಿಗೆ/ಹಿಂದುಳಿದ /ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಹೇಳಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




