ಸೇಡಂ:ಪಟ್ಟಣದ ಆಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ ಬರುತ್ತಿರುವ ದೂಳು ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಆತಂಕ ಉಂಟುಮಾಡಿದೆ.
ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂಬ ಉದ್ದೇಶದಿಂದ ಈ ಭಾಗಕ್ಕೆ ಸಿಮೆಂಟ್ ಕಾರ್ಖಾನೆಗಳು ತಂದಿದ್ದಾರೆ ಆದರೆ ಬೇರೆರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡಿ ಸ್ಥಳೀಯ ಯುವಕರಿಗೆ ದ್ರೋಹ ಮಾಡಿದ್ದಲ್ಲದೆ ಈಗ ಸ್ಥಳೀಯ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿರುವ ಸಿಮೆಂಟ್ ಕಾರ್ಖಾನೆಗೆ ತಕ್ಕ ಪಾಠ ಕಲಿಸುವ ಸಂಧರ್ಭ ಬಂದಿದೆ.
ಸೇಡಂ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ ಬರುತ್ತಿರುವ ಧೂಳಿನಿಂದ ಸಾರ್ವಜನಿಕರಿಗೆ ವಿವಿಧ ರೀತಿಯ ರೋಗಗಳು ಬಂದು ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.

ಪರಿಸರ ಸಂರಕ್ಷಣೆ ಮಾಡುವ ಅದಿಕಾರಿಗಳು ಇದೆಲ್ಲಾ ಅವರ ಕಣ್ಣಿಗೆ ಕಾಣದಂತೆ ನಡೆಯುತ್ತಿರುವುದೇ.? ಎಂಬುದು ಸಾರ್ವಜನಿಕರ ಪ್ರಶ್ನೆ ಆಗಿದೆ.
ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರೇ ನಿಮ್ಮ ಕ್ಷೇತ್ರದ ಜನ ಈ ರೀತಿಯ ಪರಿಸರ ಕಲುಷಿತ ವಾತಾವರಣದಲ್ಲಿ ನರಳುತ್ತಿದ್ದಾರೆ ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಿಮ್ಮದಲ್ಲವೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




