ಸವಣೂರು: ಪುರಸಭೆಯ ವ್ಯಾಪ್ತಿಗೆ ಬರುವ ಮುಖ್ಯ ಬೀದಿಗಳಲ್ಲಿ ಒಂದಾದ ಉಪ್ಪಾರ ಓಣಿಯ ದುಸ್ಥಿತಿ ಇದು.
ಗಟಾರುಗಳಲ್ಲಿ ಕಸ ಕಡ್ಡಿಗಳು ತುಂಬಿ ಗಬ್ಬೆದ್ದು ನಾರುತ್ತಿದ್ದರೂ ಸಹ ಅಧಿಕಾರಿಗಳು ಕ್ಯಾರೇ ಎನ್ನದ ಹಾಗೆ ಕೈ ಕಟ್ಟಿ ಕೂತಿರುವುದು ನಿಜಕ್ಕೂ ನಾಚಿಕೆಗೇಡಿ ಸಂಗತಿಯಾಗಿದೆ.
ಪುರಸಭೆಯ ಮುಖ್ಯಾಧಿಕಾರಿಗಳೇ ಎಸಿ ರೂಮಲ್ಲಿ ಕೂತರಷ್ಟೇ ಸಾಲದು ಸ್ವಲ್ಪ ಇತ್ತ ಕಡೆ ಗಮನ ಹರಿಸಿ….
ಸ್ವಚ್ಛ ಭಾರತ ಯೋಜನೆಯ ಕನಸು ಅಕ್ಷರಶಃ ಸವಣೂರಿನಲ್ಲಿ ಹಳ್ಳ ಹಿಡಿದಿದೆ ಎಂದರೆ ತಪ್ಪಾಗಲಾರದು,
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛತೆ ಕಡೆ ಗಮನ ಹರಿಸ್ತಾರಾ ಇಲ್ವಾ ಎಂದು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.




