ರಾಯಚೂರು: ನಗರದ ವಾಡ್ ನಂ.24ರಲ್ಲಿ 8 ಕೋಟಿ ವೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆ ವೇಳೆ ಸಮಸ್ಯೆ ಕುರಿತು ತಿಳಿಸಲು ಬಂದ ಮಹಿಳೆ ಮತ್ತು ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ಮದ್ಯೆ ವಾಗ್ವಾದ ನಡೆಯಿತು.
ರಾಯಾಚೂರು ಸ್ಥಳೀಯ ನಿವಾಸಿಯ ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ ಎಂದು ಸಮಸ್ಯೆ ಹೇಳಲು ಮುಂದಾದಾಗ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು, ಶೌಚಾಲಯ ಇರಬೇಕಲ್ಲ ಎಂದು ಹೇಳಲು ಮುಂದಾದರು.
ಆಗ ಮಹಿಳೆ ಎಲ್ಲಿದೆ ನೀವೇ ನೋಡಿ ಬನ್ನಿ ಎಂದು ಹೇಳಿದಾಗ ಕೋಪಗೊಂಡ ಪಾಪಾರೆಡ್ಡಿ, ಎ.. ಸುಮ್ನಿರು ಎಂದು ಗದರಿದರು.
ಆಗ ಮಹಿಳೆ ನೀವು ಗದರಿಸುವ ಅವಶ್ಯಕತೆಯಿಲ್ಲ, ಏಕೆ ಗದರಿಸುತ್ತೀರಿ, ಮಹಿಳೆಯರಿಗೆ ಶೌಚಾಲಯ ಮಾಡಿ
ಕೊಡುತ್ತೇವೆ ಎಂಬ ಭರವಸೆ ನೀಡಿ, ಅದು ಬಿಟ್ಟು ಗದಿಸುತ್ತೀರಿ ಏಕೆ ಎಂದು ಪಾಪಾರೆಡ್ಡಿ ವಿರುದ್ಧ ಮಹಿಳೆ ಗುಡುಗಿದರು.
ನಂತರ ಸಚಿವ ಬೋಸರಾಜು ಮಧ್ಯ ಪ್ರವೇಶಿಸಿ ಮಹಿಳೆಯನ್ನು ಸಮಾದಾನ ಪಡಿಸಲು ಮುಂದಾದರು. ಆಗ ಮಹಿಳೆ ಅವರು ಗದಿರುಸವುದು ಏಕೆ ಅವರ ಮನೆಯಲ್ಲಿ ಮಹಿಳೆಯರಿಲ್ಲವಾ.. ಅಂದು ಪ್ರಶ್ನಿಸಿದರು. ನಂತರ ಪಾಪಾರೆಡ್ಡಿ ಅವರು ಮಹಿಳೆಗೆ ನಿನಗೆ ಮನೆ ಯಾರು ಕೊಟ್ಟಿದ್ದು, ಎಂದು ಮರು ಪ್ರಶ್ನೆ ಹಾಕಿದಾಗ, ಮಹಿಳೆ ಉತ್ತರಿಸಿ,ಮನೆ ನೀವು ಕೊಟ್ಟಿದ್ದಲ್ಲ ಸರ್ಕಾರ ಕೊಟ್ಟಿದ್ದು ಎಂದು
ಗುಡುಗಿದರು.
ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ, ಮಹಿಳೆಯರನ್ನು ಕರೆದುಕೊಂಡು ಹೋಗಿ ಸಮಾದಾನ ಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




