ನವದೆಹಲಿ :ಡಿಸೆಂಬರ್ 23: ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ “ಮನ್‌ಕಿ ಬಾತ್” ಕಾರ್ಯಕ್ರಮವನ್ನು ದೇಶದ ನಾಗರಿಕರು ಕಾತುರದಿಂದ ಕಾಯುತ್ತಾರೆ. ಈ ಕಾರ್ಯಕ್ರಮವು ಕೇವಲ ಒಬ್ಬ ವ್ಯಕ್ತಿಯ ಮಾತಾಗದೆ, “ನಾನು” ಎನ್ನುವುದಕ್ಕಿಂತ “ನಾವು” ಎನ್ನುವ ಸಾಮೂಹಿಕತೆಯ ಶಕ್ತಿಯನ್ನು ಪ್ರತಿಪಾದಿಸುತ್ತದೆ.
ಪ್ರತಿ ಸಂಚಿಕೆಯಲ್ಲಿ ದೇಶದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಹೊರಹೊಮ್ಮುತ್ತಿರುವ ನವೀನ ಆಲೋಚನೆಗಳು, ಸಮಾಜವನ್ನು ಬದಲಾಯಿಸಲು ಶ್ರಮಿಸುತ್ತಿರುವ ಹೀರೋಗಳ ಕಥೆಗಳು ಹಂಚಿಕೊಳ್ಳಲಾಗುತ್ತವೆ. ಭಾಷೆ, ಸಂಪ್ರದಾಯ, ವಿಜ್ಞಾನ, ಪರಂಪರೆ, ವಿದೇಶದಲ್ಲಿ ಭಾರತೀಯ ಸಂಸ್ಕೃತಿ, ಅನ್ನದಾತನ ಶ್ರಮ, ನಾರಿಶಕ್ತಿ, ಕ್ರೀಡೆ, ಯುವಕರ ಆಕಾಂಕ್ಷೆ, ಪರಿಸರ ಸಂರಕ್ಷಣೆ, ಯೋಗ, ಆಯುರ್ವೇದ ಮತ್ತು ಸ್ವಚ್ಛತೆಯಂತಹ ವೈವಿಧ್ಯಮಯ ವಿಷಯಗಳನ್ನು ಮನ್‌ಕಿ ಬಾತ್ ಒಳಗೊಂಡಿದೆ ಎಂದಿದ್ದಾರೆ.
ವರದಿ :ಅಯ್ಯಣ್ಣ ಮಾಸ್ಟರ್




