ಬೆಳಗಾವಿ: ಹೊಸ ಚಾನೆಲ್ ಜೀ ಪವರ್ ತನ್ನ ಫಿಕ್ಷನ್ ಶೋಗಳು ಹಾಗೂ ‘ಹಳ್ಳಿ ಪವರ್’ ಎಂಬ ನಾನ್-ಫಿಕ್ಷನ್ ರಿಯಾಲಿಟಿ ಶೋ ಮೂಲಕ ಈಗಾಗಲೇ ವೀಕ್ಷಕರ ಮನಗೆದ್ದಿದೆ. ಅಕುಲ್ ಬಾಲಾಜಿ ಅವರ ನಿರೂಪಣೆಯ ‘ಹಳ್ಳಿ ಪವರ್’ ಶೋ ಇದೀಗ ಅಂತಿಮ ಘಟ್ಟವನ್ನು ತಲುಪಿದೆ. ಸಂಗೊಳ್ಳಿಯಲ್ಲಿ ನಡೆಯುತ್ತಿದ್ದ ಈ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಇದೇ ಡಿಸೆಂಬರ್ 22ರಂದು ನಡಡದಿದ್ದು,
ಸಿಟಿಯಲ್ಲಿ ಬೆಳೆದ ಹುಡುಗಿಯರು ತಮ್ಮ ಆಧುನಿಕ ಜೀವನಶೈಲಿಯನ್ನು ತ್ಯಜಿಸಿ, ಹಳ್ಳಿ ಯುವತಿಯರಂತೆ ಜೀವನ ನಡೆಸುವುದೇ ‘ಹಳ್ಳಿ ಪವರ್’ ಶೋನ ವಿಶೇಷತೆ. ಹಳ್ಳಿಯ ದಿನನಿತ್ಯದ ಕೆಲಸಗಳನ್ನು ಸ್ಪರ್ಧಿಗಳಿಗೆ ಟಾಸ್ಕ್ಗಳ ರೂಪದಲ್ಲಿ ನೀಡಲಾಗುತ್ತಿತ್ತು. ಸಿಟಿ ಹುಡುಗಿಯರು ಹಳ್ಳಿಯಲ್ಲಿ ಹೇಗೆ ಹೊಂದಿಕೊಂಡು ಜೀವನ ನಡೆಸುತ್ತಾರೆ ಎಂಬುದೇ ಈ ಶೋನ ಪ್ರಮುಖ ಹೈಲೈಟ್ ಆಗಿತ್ತು.ಎಲ್ಲಾ ಟಾಸ್ಕ್ಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫಿನಾಲೆಗೆ ಆಯ್ಕೆಯಾಗಿರುವ ಸ್ಪರ್ಧಿಗಳು. ಇನ್ನು ‘ಹಳ್ಳಿ ಪವರ್’ ಮೊದಲ ಸೀಸನ್ನ ವಿಜೇತರಾಗುವವರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಡಿಸಂಬರ್ 22ರಂದು ‘ಹಳ್ಳಿ ಪವರ್’ ಗ್ರ್ಯಾಂಡ್ ಫಿನಾಲೆಯ ಸಂಭ್ರಮದ ಜೊತೆ ಡಿಸೆಂಬರ್ 23 ರಂದು ಸಂಗೊಳ್ಳಿಯ ಜನತೆಯನ್ನು ನಕ್ಕು ನಗಿಸಲು ಕಾಮಿಡಿ ಕಿಲಾಡಿಗಳು ತಂಡ ನಗೆ ಉತ್ಸವ’ ಮಾಡೋಕೆ.. ನಗುವಿನ ಸುನಾಮಿ ಎಬ್ಬಿಸೋ ಸ್ಕಿಟ್ಗಳು, ಕಿಲಾಡಿಗಳ ತರ್ಲೆ ತಮಾಷೆಗಳು, ಸಖತ್ ಪರ್ಪರ್ಮೆನ್ಸ್ಗಳ. ಮಹಾ ಮನರಂಜನೆ ಜನರಿಗೆ ಸಿಗಲಿದೆ. ಸಂಗೊಳ್ಳಿರಾಯಣ್ಣ ಶಿಕ್ಷಣ ಸಂಸ್ಥೆಯ ಎಸ್.ಎಂ.ಕೆ ಪ್ರೌಢಶಾಲೆ.ಇಂದು ಡಿಸೆಂಬರ್ 22 ರಂದು ಹಳ್ಳಿ ಪವರ್ ಗ್ರ್ಯಾಂಡ್ ಫಿನಾಲೆ.ಡಿಸೆಂಬರ್ 23 ರಂದು ಸಂಜೆ 5 ಗಂಟೆ ಕಾಮಿಡಿ ಕಿಲಾಡಿಗಳ ನಗೆ ಉತ್ಸವ ನಡೆಯಲಿದೆ.




