ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದಕ್ಕೆ ಹೆತ್ತ ಮಗಳನ್ನು ಮರ್ಯಾದೆ ಹತ್ತೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೋಬಳಿ ಪೊಲೀಸರು ಮತ್ತೆ ಮೂರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಪಿ ಐ ಮುರುಗೇಶ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ಇನಾಂ ವೀರಾಪುರ ಗ್ರಾಮದ ಫಕೀರ ಗೌಡ ಪಾಟೀಲ್, ಬಸನಗೌಡ ಪಾಟೀಲ್ ಹಾಗು ಗುರುಸಿದ್ದಗೌಡ ಪಾಟೀಲ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಇನ್ನು ಇದೆ ಘಟನೆಗೆ ಸಂಬಂಧಿಸಿದಂತೆ ರೋಚಕ ಟ್ವಿಸ್ಟ್ ದೊರೆತಿದೆ. ಮರ್ಯಾದಾ ಹತ್ಯೆಗೂ ಮುನ್ನ ಅಳಿ ವಿವೇಕಾನಂದನ ಇಡೀ ಕುಟುಂಬವನ್ನೇ ನಾಶ ಮಾಡಲು ತಂದೆ ಪ್ರಕಾಶ್ ಗೌಡ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ದಲಿತ ಯುವಕ ವಿವೇಕಾನಂದನನ್ನು ಮದುವೆಯಾಗಿದ್ದಕ್ಕೆ 20 ವರ್ಷ ವಯಸ್ಸಿನ ಮಾನ್ಯಾ ಪಾಟೀಲ್ ಅವರನ್ನು ಅವರ ತಂದೆ ಪ್ರಕಾಶ್ ಗೌಡ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ.
ಆದರೆ, ಕೇವಲ ಮಗಳ ಹತ್ಯೆ ಮಾತ್ರವಲ್ಲ, ಅಳಿಯ ವಿವೇಕಾನಂದನ ತಂದೆ ಮತ್ತು ವಿವೇಕಾನಂದನನ್ನೂ ಕೊಲ್ಲಲು ಪ್ರಕಾಶ್ ಗೌಡ ಮಾಸ್ಟರ್ ಪ್ಲಾನ್ ಮಾಡಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.ಈ ಎರಡು ಕೊಲೆ ಯತ್ನಗಳು ವಿಫಲವಾದ ನಂತರ ಆತ ಮಗಳನ್ನೇ ಕೊಂದಿದ್ದಾನೆ. ಈ ಕೃತ್ಯದಲ್ಲಿ ಕೆಲವು ಗ್ರಾಮಸ್ಥರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




