Ad imageAd image

ಭಾಕರ ರಾಣೆ ಯವರ ಶಿಕ್ಷಣ ಪ್ರೇಮ ಬಡ ಮಕ್ಕಳ ಬದುಕಿಗೆ ಆಸರೆಯಾಗಿದೆ: ಬಿ. ಜಿ. ವಿ. ಎಸ್. ಸಂಸ್ಥೆಯ ಅಧ್ಯಕ್ಷೆ ವನಿತಾ ರಾಣೆ

Bharath Vaibhav
ಭಾಕರ ರಾಣೆ ಯವರ ಶಿಕ್ಷಣ ಪ್ರೇಮ ಬಡ ಮಕ್ಕಳ ಬದುಕಿಗೆ ಆಸರೆಯಾಗಿದೆ: ಬಿ. ಜಿ. ವಿ. ಎಸ್. ಸಂಸ್ಥೆಯ ಅಧ್ಯಕ್ಷೆ ವನಿತಾ ರಾಣೆ
WhatsApp Group Join Now
Telegram Group Join Now

ಜೊಯಿಡಾ: ಪ್ರಭಾಕರ ರಾಣೆ ಯವರ ಶಿಕ್ಷಣ ಪ್ರೇಮ ಜೋಯಿಡಾ ತಾಲೂಕಿನ ಬಡ ಮಕ್ಕಳ ಬದುಕಿಗೆ ಆಸರೆಯಾಗಿದೆ, ಈ ಸಂಸ್ಥೆಯನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸೋಣ. ತಾಯಿ ತಂದೆಯಲ್ಲಿ ಗೌರವ ಇಡಿ. ಸ್ವಚ್ಚ, ಸಂಮೃದ್ದ ಮನೋವೃತ್ತಿಯ, ಸುಂಸ್ಕೃತರಾಗಿ ಬಾಳಿ ಎಂದು ಬಿ. ಜಿ. ವಿ. ಎಸ್. ಸಂಸ್ಥೆಯ ಅಧ್ಯಕ್ಷೆ ವನಿತಾ ರಾಣೆ ಹೇಳಿದರು.

ಜಿಲ್ಲಾ ರೈತಸಂಘದ ಅಧ್ಯಕ್ಷ ಹಾಗೂ ಬಿ. ಜಿ. ವಿ. ಎಸ್. ಸಂಸ್ಥೆಯ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡುತ್ತಾ, ಪಕ್ಷಪಾತ ಮರೆತು ಶಿಕ್ಷಣದ ಅಭಿವೃದ್ದಿಗೆ ಎಲ್ಲವರ್ಗದವರು ಕೈಜೋಡಿಸಬೇಕು. ಮಕ್ಕಳು ಪಾಲಕರ ಶ್ರಮಕ್ಕೆ ಪ್ರತಿಫಲ ನೀಡುವಂತೆ ಬೆಳೆಯ ಬೇಕೆಂದು ಕರೆ ನೀಡಿದರು.

ಕಾಳಿ ಬ್ರಿಗೇಡ ಮುಖ್ಯಸ್ಥ ಹಾಗೂ ಸಂಸ್ಥೆಯ ಸ್ಥಳಿತ ಸಮಿತಿ ಕಾರ್ಯದರ್ಶಿ ರವಿ ರೆಡ್ಕರ ಮಾತನಾಡಿ, ಗಾಂದಿಜಿಯ ಗ್ರಾಮ ಸ್ವರಾಜದ ಕನಸನ್ನು ನನಸು ಮಾಡಿದ ಒರ್ವ ಮಹಾನ ವ್ಯಕ್ತಿ ಪ್ರಭಾಕರ ರಾಣೆ. ಅವರ ಕನಸಿನ ಬಾಪೂಜಿ ಸಂಸ್ಥೆ ಜೋಯಿಡಾದಂತ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೆ ಕಾಲೇಜು ಶಿಕ್ಷಣ ನೀಡಿ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಿದೆ. ಮೋಬೈ, ಕ್ರೀಕೇಟ ದೂರವಿಟ್ಟು ಶಿಕ್ಷಣದ ಕಡೆಗೆ ಮಕ್ಕಳು ಲಕ್ಷ ವಹಿಸುವಲ್ಲಿ ಪಾಲಕರು ಎಚ್ಚರವಹಿಸಬೇಕೆಂದು ಹೇಳಿದರು.
ಭಾಷೆ ಯಾರ ಮಿತಿಗೂ ಒಳಪಟ್ಟಿಲ್ಲ, ಶಿಕ್ಷಣ ಪಡೆಯುವ ಭಾಷೆಗೆ ಹೆಚ್ಚಿನ ಮಹತ್ವ ನೀಡಿ, ಮಕ್ಕಳಿಗೆ ಈಗಲೇ ಸಮಾಜಿಕ ಜವಾಬ್ದಾರಿ ಬೆಳೆಸಿ, ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಅವರ ಬುದ್ದಿಮತ್ತೆ ಬೆಳೆಸಿಕೊಳ್ಳಿ ಎಂದು ಬಿ. ಜಿ. ವಿ. ಎಸ್. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪವಾರ ಹೇಳಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆ ಎಂಬ ನಾಲ್ಕು ಕಂಬಕಳಿರುತ್ತಿದೆ. ಎಲ್ಲರ ಪ್ರಯತ್ನ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ.ಎಂದು ಸಂಸ್ಥೆ ಸಹಕಾರ್ಯದರ್ಶಿ ಕಿಶೋರ ರಾಣೆ ಕರೆ ನೀಡಿದರು. ಸಂಸ್ಥೆಯ ಸದಸ್ಯ ತುಕಾರಾಮ ಮಾಂಜ್ರೇಕರ ಮಾತನಾಡಿದರು. ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿ ಸಹಕಾರ ನೀಡುತ್ತಿರುವರನ್ನು ಸ್ಮರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಸುನೀಲ ದೇಸಾಯಿ, ಚಂದ್ರಕಾಂತ ದೇಸಾಯಿ, ಶ್ಯಾಮ ಪೋಕಳೆ, ಮಾಬಳು ಕುಂಡಲ್ಕರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮುಕ್ತಾಯ ಕಂಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!