Ad imageAd image

ಅಣಶಿ ಗ್ರಾಮಸ್ಥರಿಂದ ರಸ್ತೆಗಾಗಿ ಪ್ರತಿಭಟನೆ ಎಚ್ಚರಿಕೆ

Bharath Vaibhav
ಅಣಶಿ ಗ್ರಾಮಸ್ಥರಿಂದ ರಸ್ತೆಗಾಗಿ ಪ್ರತಿಭಟನೆ ಎಚ್ಚರಿಕೆ
WhatsApp Group Join Now
Telegram Group Join Now

ಜೊಯಿಡಾ: ತಾಲೂಕಿನ ಅಣಶಿ ಸದಾಶಿವಗಡ ರಾಜ್ಯ ಹೆದ್ದಾರಿ ಸರಿಪಡಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಅಳವಡಿಸಿದ ಬಿಎಸ್ಎನ್ಎಲ್ ಮೊಬೈಲ್ ಟವರ್ ಗಳಿಗೆ ಸಂಪರ್ಕ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಜನವರಿ 6 ರಂದು ಅಣಶಿ ಯಲ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳಿಯರು ತಹಶಿಲ್ದಾರ ಮೂಲಕ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ನುಜ್ಜಿಯಿಂದ ಬರಪಾಲಿ ತನಕ15 ಕಿ.ಮಿ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಶಾಲಾ ಮಕ್ಕಳು, ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಲು ಮತ್ತು ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿದೆ. ಗ್ರಾಮಿಣ ಭಾಗವಾದ ನುಜ್ಜಿ, ಬಾಡಪೋಲಿ, ಲಾಂಡೇ, ಶ್ರೀಪತಿ, ತೇರಾಳಿ, ಡಿಗ್ಗಿ ಹೀಗೆ ಅನೇಕ ಕಡೆ ಬಿಎಸ್ಎನ್ಎಲ್ ದಿಂದ ಟವರ್ ನಿರ್ಮಾಣ ಮಾಡಲಾಗಿದೆ. ಆದರೆ ಸಂಪರ್ಕ ವ್ಯವಸ್ಥೆ ಮಾಡಿಲ್ಲ, ಅಧಿಕಾರಿಗಳು ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ.

ಜೊಯಿಡಾ ತಹಶಿಲ್ದಾರ ಮೂಲಕ ಅನೇಕ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅಣಶಿ ಕೇಂದ್ರದಲ್ಲಿ ಜನವರಿ 6 ರಂದು ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಮನವಿಯನ್ನು ಪ್ರಮುಖರಾದ ದೀಪಕ ದೇಸಾಯಿ, ಕಿರಣ ಹರಿಜನ, ಮುರಲಿಧರ ದೇಸಾಯಿ, ಧೀರಜ್ ದೇಸಾಯಿ, ವಿನಂತಿ ದೇವಳಿ, ವಿನೋದ್ ದೇವಳಿ, ವಿಶ್ವನಾಥ್ ಹರಿಜನ, ಗಿತಾಂಜಲಿ ದೇಸಾಯಿ, ನರಹರಿ ದೇಸಾಯಿ, ಶ್ರೀಕಾಂತ್ ಹರಿಜನ, ಸಂಗೀತಾ ದೇಸಾಯಿ ಮುಂತಾದವರು ಇದ್ದರು..

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!