ವಿಜಯಪುರ : ೧೨ನೇ ಶತಮಾನದ ಬಸವಾದಿ ಶರಣರ ವಚನಾಮೃತ, ತತ್ವಜ್ಞಾನ ಹಾಗೂ ಅವರ ವಿಚಾರಧಾರೆಗಳು ಕಾಯಕ, ದಾಸೋಹ ಮತ್ತು ಪ್ರಸಾದದಂತಹ ಆಚರಣೆಗಳೊಂದಿಗೆ ಬೆಸೆದುಕೊಂಡ ಶರಣರ ಸಂದೇಶಗಳು ಸಾರ್ವಕಾಲಿಕ ಎಂದು ಸಾಹಿತಿ,ಖ್ಯಾತ ದಂತ ವೈದ್ಯೆ ಡಾ. ರೇಖಾ ಪಾಟೀಲ ಅಭಿಪ್ರಾಯಪಟ್ಟರು.
ಇಂದು ರವಿವಾರ ದಿನಾಂಕ ೨೧-೧೨-೨೦೨೫ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ. ಬಸವರಾಜ ಪರಪ್ಪ ಆಲೂರು ದತ್ತಿದಾನಿಗಳು: ಶ್ರೀ ಶರಣಪ್ಪ ಸಂಗಪ್ಪ ಆಲೂರು. ವಿಷಯ: ಶರಣರ ಚಿಂತನೆ ಹಾಗೂ
ದಿ. ಶರಣಪ್ಪ ಭೋವಿ ಆಲಮೇಲ ದತ್ತಿ. ದತ್ತಿ ದಾನಿಗಳು ಶ್ರೀ ರಾಜಣ್ಣ ಶರಣಪ್ಪ ಭೋವಿ, ಆಲಮೇಲ ದತ್ತಿ. ವಿಷಯ: ಶರಣರ ಸಂದೇಶಗಳ ಕುರಿತು ಹಾಗೂ ಶ್ರೀ ಅಶೋಕ ಕುಮಾರ ಗಂಜ್ಯಾಳ ಸೇನಾನಗರ ವಿಜಯಪುರ ಇವರ ದತ್ತಿ. ದತ್ತಿಯ ವಿಷಯ: ಬುದ್ಧಿಮಾಂದ್ಯ ಮಕ್ಕಳ ಬೆಳವಣಿಗೆ ಹಾಗೂ ಪಾಲನೆಯ ಕುರಿತು ಏರ್ಪಡಿಸಿದ ವಿವಿಧ ದತ್ತಿ ಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶರಣರ ಅನುಭಾವದ ತತ್ವಗಳನ್ನು ಸಾಮಾನ್ಯ ಜನರ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ವಚನಗಳ ರೂಪದಲ್ಲಿ ರಚಿಸಿ ಹೋಗಿದ್ದು, ಅವುಗಳ ಸಾರವನ್ನು ನಾವೆಲ್ಲ ಅರ್ಥೈಸಿಕೊಂಡು, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಆದರ್ಶ ಸಮಾಜವನ್ನು ನಿರ್ಮಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಮಹಿಳಾ ಪ.ಪೂ ಕಾಲೇಜಿನ ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿ ಆತ್ಮಶುದ್ಧಿ ಮತ್ತು ಆತ್ಮಬಲ ವೃದ್ಧಿಸಿಕೊಳ್ಳಲು ಶರಣರ ಸಂದೇಶಗಳು ನಮಗೆ ದಿಕ್ಸೂಚಿಯಾಗಿ ನಿಂತಿವೆ ಎಂದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾತ್ಮಕವಾಗಿ ದತ್ತಿಗೋಷ್ಠಿಗಳ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಮೂಡಿಸುವ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಜಿಲ್ಲೆಯ ಘನತೆ, ಗೌರವವನ್ನು ಪರಿಷತ್ತು ನಾಡಿನ ತುಂಬೆಲ್ಲ ಹೆಚ್ಚಿಸಿದೆ ಎಂದರು.
“ಶರಣರ ಸಂದೇಶಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಸುಖದೇವಿ ಅಲಬಾಳಮಠ ಮಾತನಾಡಿ ಜಾತಿ, ಲಿಂಗಬೇಧವಿಲ್ಲದೇ ಎಲ್ಲರಿಗೂ ಸಮಾನ ಅವಕಾಶ ನೀಡಿರುವ, ನುಡಿದಂತೆ ನಡೆದು ಸಮಸಮಾಜದ ಕಲ್ಪನೆ ನೀಡಿ ಹೋದ ಶರಣರ ಸಂದೇಶಗಳೇ ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದರು.
“ಬುದ್ಧಿಮಾಂದ್ಯ ಮಕ್ಕಳ ಬೆಳವಣಿಗೆ ಹಾಗೂ ಪಾಲನೆಯ ಕುರಿತು” ವಿಶೇಷ ಉಪನ್ಯಾಸ ನೀಡಿದ ಸಾಹಿತಿ ರೇವತಿ ಬೂದಿಹಾಳ ಮಾತನಾಡಿ ಬುದ್ಧಿಮಾಂದ್ಯ ಮಕ್ಕಳನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಜ್ಞಾವಂತ ಸಮಾಜದ ಪಾತ್ರ ಬಹುಮುಖ್ಯ ವಾಗಿದೆ ಎಂಬುದರ ಕುರಿತು ಮನೋಜ್ಞವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಗಮೇಶ ಮುರಗೋಡ, ರಾಜಣ್ಣ ಶರಣಪ್ಪ ಭೋವಿ, ಅಶೋಕಕುಮಾರ ಗಂಜ್ಯಾಳ, ದಾನೇಶ ಅವಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ದತ್ತಿ ಸಂಚಾಲಕ ಅರ್ಜುನ ಶಿರೂರ ಅವರನ್ನು ಹಾಗೂ ಪತ್ರಿಕಾ ಮಾಧ್ಯಮದ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಮಹಾಂತೇಶ ನೂಲಾನವರ, ಸಂಗಮೇಶ ಉತ್ನಾಳ, ರಾಜು ಗಣಾಚಾರಿಯವರನ್ನು ಸನ್ಮಾನಿಸಲಾಯಿತು.
ಮಾನಸ ಶ್ಯಾಮಸುಂದರ ಪ್ರಾರ್ಥಿಸಿದರು. ಆರೀಫಾ ಮಿರ್ಜಾ ಸ್ವಾಗತಿಸಿ ಗೌರವಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆನಂದ ಕುಲಕರ್ಣಿ ಸನ್ಮಾನಿತರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಸಂಗಮೇಶ ಚೂರಿ, ರವಿ ಕಿತ್ತೂರ, ಎಸ್.ಎಂ.ಶೇಖ, ಟಿ.ಆರ್ ಹಾವಿನಾಳ, ಕೆ.ಎಸ್ ಹಣಮಾಣಿ, ಫಕ್ರುದ್ದೀನ್ ಅಲಿಅಹ್ಮದ ಹಿರೇಕೊಪ್ಪ, ಪರವೀನ್ ಶೇಖ, ರಿಯಾಜ ಪಿಂಜಾರ, ಸುರೇಶ ಕಾಗಲಕರರೆಡ್ಡಿ, ಶಿವಾಜಿ ಮೋರೆ, ಗಂಗಮ್ಮ ರಡ್ಡಿ, ಅಹ್ಮದ ವಾಲೀಕಾರ, ಬಸನಗೌಡ ಬಿರಾದಾರ, ಸಿದ್ದಣ್ಣ ಸಾತಲಗಾಂವ, ಮಮತಾ ಮುಳಸಾವಳಗಿ, ಆಶಾ ಬಿರಾದಾರ, ರಶ್ಮಿ ಬದ್ನೂರ, ಜಯಶ್ರೀ ಬಿ.ಆರ್, ಎಮ್.ಎನ್.ಆಲಮೇಲ, ಸಂತೋಷ ಹತ್ತಿ, ದೇವೀಂದ್ರ ರಾಠೋಡ, ಡಾ.ರಾಜಕುಮಾರ ಬೆನಕನಹಳ್ಳಿ, ಮಹಾದೇವ ಚನಗೊಂಡ, ಸಿದ್ದು ಬೀಳಗಿ, ರಾಜು ಗಣಾಚಾರಿ, ಸಂಗಮೇಶ ಉತ್ನಾಳ, ಮಂಜುನಾಥ ಬ್ಯಾಕೋಡ, ಬಸವರಾಜ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸಾಯಬಣ್ಣ ಮಾದರ




