Ad imageAd image

ಕೃಷಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

Bharath Vaibhav
ಕೃಷಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ
WhatsApp Group Join Now
Telegram Group Join Now

ಮೊಳಕಾಲ್ಮೂರು :ಭಾರತ ಸರ್ಕಾರದ 5ನೇ ಪ್ರಧಾನಮಂತ್ರಿ ಆಗಿದ್ದ ಚೌದರಿ ಚರಣ್ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ರೈತರಿಗೋಸ್ಕರ ಉತ್ತಮ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ರೈತ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು ತಿಳಿಸಿದರು.

ಪಟ್ಟಣದ ಮಂಗಳವಾರ ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇವರ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಅವರು ಮಾತನಾಡಿದರು ಚರಣ್ ಸಿಂಗ್ ರೈತರ ಏಳಿಗೆಗಾಗಿ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಉದಾಹರಣೆ ಎಂಬಂತೆ ಜಮೀನ್ದಾರ್ ಪದ್ಧತಿಯನ್ನು, ಅನೇಕ ಭೂ ಸುಧಾರಣೆ ಕಾಯ್ದೆಗಳನ್ನು ಅನುಷ್ಠಾನ ಮಾಡಿ ರೈತರಿಗೆ ಅನುಕೂಲ ವಾಗುವಂತಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ರೈತರಿಗೋಸ್ಕರ ಉತ್ತಮ ಕಾರ್ಯಗಳನ್ನು ಮಾಡಿರುವ ಉದ್ದೇಶಕ್ಕೆ ಈ ದಿನವನ್ನು ರೈತ ದಿನಾಚರಣೆ ಎಂದು ಆಚರಣೆ ಮಾಡುತ್ತಿದ್ದೇವೆ ಎಂದರು.

ರೈತ ಕಲ್ಯಾಣಕ್ಕೋಸ್ಕರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದವೇ ಆದರೂ ಕೂಡ ರೈತರ ಜೀವನ ಕಷ್ಟಕರವಾಗಿ ಸಾಗುತ್ತಿದೆ. ರೈತರು ಅನೇಕ ಯೋಜನೆಗಳು ಸದ್ಬಳಿಕೆ ಮಾಡಿಕೊಂಡರು ಕೂಡ ರೈತರು ಮೇಲೆ ಬರುತ್ತಿಲ್ಲ, ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕು ವಾತಾವರಣದ ಏರುಪೇರಿಯಿಂದಾಗಿ ಬೆಳೆ ಕೂಡ ನಷ್ಟವಾಗುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.

ಆದರೂ ಕೂಡ ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗ ಪಡೆದುಕೊಂಡು ಹೆಚ್ಚಿನ ಆದಾಯ ಗಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಂಕಲ್ ಬಸವರಾಜ್ ಮಾತನಾಡಿ, ನಾವು ಈ ಹಿಂದೆ ವ್ಯಾಸಂಗ ಮಾಡುತ್ತಿದ್ದಾಗ ಭಾರತ ಕೃಷಿ ಪ್ರಧಾನವಾದ ದೇಶ ಎಂದು ದೇಶದಲ್ಲಿ 70% ರೈತರಿದ್ದಾರೆ ಅನೇಕ ಜನರು ಹಳ್ಳಿಯಲ್ಲಿ ವಾಸ ಮಾಡುತ್ತಿದ್ದಾರೆ ಕಾಲಕ್ಕೆ ತಕ್ಕಂತೆ ಎಲ್ಲವೂ ಏರುಪೇರಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಸಿದ್ದಯ್ಯನ ಕೋಟೆ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ
ರೈತರನ್ನು ಕಡೆಗಣಿಸಬೇಡಿ, ರೈತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು, ರೈತರು ಧೃತಿಗೆಡಬಾರದು ಯಾವುದೇ ಕಾರಣಕ್ಕೂ ತಮ್ಮ ಜೀವಕ್ಕೆ ಕುತ್ತು ತರುವಂತಹ ಕೆಲಸಗಳನ್ನು ಮಾಡಬಾರದು ಎಂದು ರೈತರಿಗೆ ಕಿವಿ ಮಾತು ಹೇಳಿದರು, ರೈತರು ಹೋರಾಟ ನಿರಂತರವಾಗಿ ನಡೆಯುತ್ತದೆ ಕೆಲ ದಿನಗಳ ಹಿಂದೆ ಕಬ್ಬು ಬೆಳೆಗಾರರ ಹೋರಾಟ ಎಲ್ಲಿಗೆ ಹೋಗೆ ತಲುಪಿದೆ ಎಂಬುದು ನಿಮಗೆ ತಿಳಿದಿದೆ, ಆದರಿಂದ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭಕ್ತ ಪ್ರಹ್ಲಾದ, ಪರಮೇಶ್ವರಪ್ಪ, ಸಿಪಿಐ ಜಾಪರ್ ಷರೀಫ್, ಮಂಜುನಾಥ್ ಅಯ್ಯಣ್ಣ ಬಸವರಾಜ್ ಶಿವಣ್ಣ, ರೇಷ್ಮೆ ಇಲಾಖೆ ಅಧಿಕಾರಿ ಮಹೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ನಿರಂಜನ್, ಪಶು ಸಂಗೋಪನ ಅಧಿಕಾರಿ ರಂಗಪ್ಪ, ಬೋರಣ್ಣ, ರೈತ ಮುಖಂಡರು ಮಹಿಳೆಯರು ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ :ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!