ಸಿರುಗುಪ್ಪ : ಚಲಿಸುತ್ತಿದ್ದ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಮೂರು ಜನ ದುರ್ಮರಣ ಹೊಂದಿರುವ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯ ದೇವಿನಗರ ಕ್ಯಾಂಪಿನ ಬಳಿ ನಡೆದಿದೆ.
ಘಟನೆ ನಡೆದ ಕೆಲ ಸಮಯದಲ್ಲೇ ಸ್ಥಳೀಯರು ರಸ್ತೆ ಪಕ್ಕದ ಕಾಲುವೆಗೆ ಬಿದ್ದಿರುವ ಕಾರನ್ನು ಹೊರತೆಗಿದಿದ್ದಾರೆ.
ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಮಾಗಂಟಿ ಪ್ರಸಾದ್‌ರಾವ್, ಸಿರುಗುಪ್ಪ ನಗರದ ಮಾರುಪೂಡಿ ವಿಜಯಲಕ್ಷ್ಮಿ ಹಾಗೂ ಗೋಗಿನಿ ಸಂದ್ಯಾರಾಣಿ ಮೃತ ದುರ್ದೈವಿಗಳಾಗಿದ್ದಾರೆ. ಅದೇ ಕಾರಿನಲ್ಲಿದ್ದ ನಿಟ್ಟೂರು ಗ್ರಾಮದ ಪದ್ಮಾ, ಸಿರುಗುಪ್ಪ ನಗರದ ಬ್ರಹ್ಮೇಶ್ವರರಾವ್ ಅವರಿಗೆ ತೀವ್ರ ತರಹದ ಗಾಯಗಳಾಗಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಾಗಿಸಲಾಗಿದೆಂದು ಸಂಬಂದಿಕರು ತಿಳಿಸಿದ್ದಾರೆ.
ಬೆಳಂ ಬೆಳಿಗ್ಗೆಯೇ ಈ ದುರ್ಘಟನೆ ನಡೆದಿದ್ದು, ಅಲ್ಲಿನ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸ್ಥಳಕ್ಕೆ ತೆಕ್ಕಲಕೋಟೆ ಠಾಣೆಯ ಪೋಲೀಸರು ಬೇಟಿ ನೀಡಿ ತನಿಖೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಂಬಂದಿಕರಾದ ಐವರು ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ ಅಪಘಾತವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಕಲೆಂದು ತಾಲೂಕು ಕಮ್ಮವಾರಿ ಸಂಘದಿಂದ ಸಂತಾಪ ವ್ಯಕ್ತವಾಗಿದೆ.




