ಬೆಂಗಳೂರು : ಮದುವೆಯಾಗಿ ಒಂದು ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.
ಪತಿಯ ಮನೆಯಲ್ಲಿ ಐಶ್ವರ್ಯ (26) ಆತ್ಮಕ್ಕೆ ಶರಣಾಗಿದ್ದಾಳೆ ಗಂಡನೇ ಕೊಲೆ ಮಾಡಿದ್ದಾರೆ ಎಂದು ಐಶ್ವರ್ಯ ಪೋಷಕರು ಆರೋಪಿಸುತ್ತಿದ್ದಾರೆ.
ನಾಗಮಂಗಲ ನಿವಾಸಿಯಾಗಿದ್ದ ಐಶ್ವರ್ಯ MBA ವ್ಯಾಸಂಗ ಮಾಡಿದ್ದರು. ಮಮತಾ ಹಾಗೂ ಕೃಷ್ಣಮೂರ್ತಿ ದಂಪತಿಯ ಹಿರಿಯ ಮಗಳು ಐಶ್ವರ್ಯ ಎಂಬಿಎ ಓದಿದ್ದಳು.
ಐಶ್ವರ್ಯಗೆ ಲಿಖಿತ್ ಸಿಂಹ ಜೊತೆ ಮದುವೆಯಾಗಿತ್ತು. ಬಾಗಲಗುಂಟೆ ಪೈಪ್ ಲೈನ್ ಮಲ್ಲಸಂದ್ರ ನಿವಾಸಿಯಾಗಿರುವ ಲಿಖಿತ್ ಸಿಂಹ ಜೊತೆ ಮದುವೆಯಾಗಿತ್ತು. ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿತ್ತು.
27 ದಿನಗಳ ಹಿಂದೆ ಅಷ್ಟೇ ಐಶ್ವರ್ಯ ಲಿಖಿತ್ ಸಿಂಹ ಮದುವೆಯಾಗಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿಯ ವಿರುದ್ಧ ಕಿರುಕುಳ ಕೇಳಿ ಬಂದಿದೆ.
ಈ ಕುರಿತು ನಿನ್ನೆ ಬೆಳಿಗ್ಗೆ ತಾನೆ ಎರಡು ಕುಟುಂಬಗಳು ರಾಜಿ ಪಂಚಾಯತಿ ಮಾಡಿದ್ದರು ಇಷ್ಟಾದರೂ ನಿನ್ನೆ ಸಂಜೆ ಐಶ್ವರ್ಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಹಲ್ಲೆ ಬಳಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಐಶ್ವರ್ಯ ಶವ ಪತ್ತೆಯಾಗಿದೆ ಈ ವೇಳೆ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಲಿಖಿತ್ ಸಹೋದರ ಆಕೆಯ ಪೋಷಕರಿಗೆ ತಿಳಿಸಿದ್ದಾನೆ.
ಮನೆಗೆ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಶವ ಪತ್ತೆಯಾಗಿದೆ. ಡೋರ್ ಒಡೆಯದ ಹಿನ್ನೆಲೆ ಐಶ್ವರ್ಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಂಡನೇ ನೇಣು ಹಾಕಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




