ಗದಗ : ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಮಹತ್ತರ ಕನಸಾದ ಮತ್ತು ಮಾನ್ಯ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಸಾಹೇಬರು, ಶ್ರೀ ಸಲೀಂ ಅಹಮದ್ ಸಾಹೇಬರು, ಶ್ರೀ ಜಿ ಸ್ ಪಾಟೀಲ್ ಸಾಹೇಬರು, ಶ್ರೀ ಡಿ ಆರ್ ಪಾಟೀಲ್ ಸಾಹೇಬರು ಇವರುಗಳು ಮಾರ್ಗದರ್ಶನದಲ್ಲಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಭವನದ ನಿರ್ಮಾಣಕ್ಕೆ ಭೂಮಿ ಧಾನ ನೊಂದಣಿ ಕಾರ್ಯಕ್ರಮ ನಡೆಯಿತು,
ಸದರಿ ಭೂಮಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಎನ್, ದೊಡ್ಡಮನಿ ಅವರು ಸುಮಾರು 2100 ಚದರ ಅಡಿಗಳಷ್ಟು ಭೂಮಿ ಧಾನ ಮಾಡಿದರು. ಕಾರ್ಯಕ್ರಮಕ್ಕೆ ಕೆಪಿಸಿಸಿ ಕಚೇರಿ ಕಾರ್ಯದರ್ಶಿಯಾದ ಶ್ರೀ ವಿಜಯ್ ಮುಳಗುಂದ ಹಾಗೂ ಶ್ರೀ ಎಲ್ ನಾರಾಯಣ ಅವರು ಆಗಮಿಸಿದ್ದರು,
ಸದರಿ ಕಾರ್ಯಕ್ರಮದಲ್ಲಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹುಮಾಯೂನ್ ಮಾಗಡಿ ಅವರು ಹಾಗೂ ಶಿರಹಟ್ಟಿ ತಾಲೂಕ ಪಂಚ ಗ್ಯಾರಂಟಿ ಅಧ್ಯಕ್ಷರಾದ ಶ್ರೀ ವೀರಯ್ಯ ಪಿ, ಮಠಪತಿ ಅವರು, ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಹಿರಿಯ ದುರಿಣರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಅಣ್ಣಪ್ಪ ಗುತ್ತೆಮ್ಮನವರ




