ಬೆಳಗಾವಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಪ್ರೇಯಸಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಂತ ಸ್ನೇಹಿತನನ್ನೇ ಆಕೆಯ ಮುಂದೆ ನಗ್ನಗೊಳಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಳಗಾವಿಯ ಚಿಕ್ಕೋಡಿ ಪಟ್ಟಣದ ನಿವಾಸಿ ಪ್ರದೀಪ್ ನಾಯಕ ಎಂಬಾತನೇ ಹೀಗೆ ಕೃತ್ಯವೆಸಗಿ ಬಂಧಿಸಲ್ಪಟ್ಟ ಆರೋಪಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಘಟಪ್ರಭಾದ ಮಹೇಶವಾಡಿ ಗ್ರಾಮದ ತುಕಾರಾಮ್ ಶಿಂಘೆಯನ್ನು ಪ್ರೇಯಸಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಆ ಕಾರಣಕ್ಕೆ ಪ್ರೇಯಿಸಿಯ ಮುಂದೆಯೇ ಅ.22ರಂದು ಕೊಲೆ ಮಾಡಿ ಪ್ರದೀಪ್ ನಾಯಕ್ ಪರಾರಿಯಾಗಿದ್ದನು.
ಆರಂಭದಲ್ಲಿ ಮೃತ ಯುವಕ ಗುರುತು ಸಿಕ್ಕಿರಲಿಲ್ಲ. ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಬಳಸಿ ಬಳಸಿ ಹುಡುಕಾಟ ನಡೆಸಿದ್ದರು. ಫಿಂಗರ್ ಪ್ರಿಂಟ್ ಪಡೆದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತ ವ್ಯಕ್ತಿಯ ಗುರುತನ್ನು ಟ್ಯಾಟೋ, ಫಿಂಗ್ ಪ್ರಿಂಟ್ ಆಧಾರದ ಮೇಲೆ ಮಹೇಶವಾಡಿ ಗ್ರಾಮದ ತುಕಾರಾಮ್ ಶಿಂಘೆ ಎಂಬುದಾಗಿ ಗುರುತಿಸಿದ್ದರು.
ಆ ಬಳಿಕ ಸಿಸಿಟಿವಿ ವೀಡಿಯೋ ಪರಿಶೀಲಿಸಿದಾಗ ಪ್ರದೀಪ್, ತುಕಾರಾಮ್ ಹಾಗೂ ಮಹಾರಾಷ್ಟ್ರ ಮೂಲದ ಆರೀಫ್ ಮೂವರು ಸ್ನೇಹಿತರಾಗಿದ್ದದ್ದು, ಬಾರ್ ನಲ್ಲಿ ಪಾರ್ಟಿ ಮಾಡಿದಂತ ವೀಡಿಯೋ ಲಭ್ಯವಾಗಿತ್ತು. ಆ ದೃಶ್ಯಾವಳಿ ಆಧರಿಸಿ, ವಿಚಾರಣೆ ನಡೆಸಿದಂತ ಪೊಲೀಸರು ಎರಡು ತಿಂಗಳ ಬಳಿಕ ಆರೋಪಿ ಪ್ರದೀಪ್ ನಾಯಕ್ ಅವರನ್ನು ಬಂಧಿಸಿದ್ದಾರೆ.
ಅಂದಹಾಗೇ ತುಕಾರಾಮ್ ಘಟಪ್ರಭಾದಲ್ಲಿ ಕೆಲಸ ಮಾಡುತ್ತಿದ್ದರೇ, ಪ್ರದೀಪ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದನು.
ಪ್ರದೀಪ್ ಪ್ರೀತಿಸುತ್ತಿದ್ದಂತ ಯುವತಿಯ ಜೊತೆಗೆ ತುಕಾರಾಮ್ ಅಕ್ರಮ ಸಂಬಂಧವನ್ನು ಹೊಂದಿದ್ದನು. ಈ ಹಿನ್ನಲೆಯಲ್ಲೇ ಪ್ರದೀಪ್, ತುಕಾರಾಮ್ ನನ್ನು ಹತ್ಯೆ ಮಾಡಿರೋದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.




