ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ದುಡ್ಡಿದ್ದವನೇ ದೊಡ್ಡಪ್ಪ ಅನ್ನೋ ಮಾತು ಸತ್ಯ ಆಗ್ತಾ ಇದೆ ಏನಪ್ಪಾ ಹೀಗೆ ಹೇಳ್ತಾ ಇದ್ದಾರೆ ಅಂತ ಅನ್ಕೊಂಡಿದ್ದೀರಾ ಇಲ್ಲೇ ಇರೋದು ವಿಷಯ ಅದೇನಪ್ಪ ಅಂದರೆ ಈ ಕಳೆದು ಎರಡು ತಿಂಗಳುಗಳಿಂದ ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಗಣ ತ್ಯಾಜ್ಯ ವಿಭಾಗ ಹಾಗೂ ಆರೋಗ್ಯ ಇಲಾಖೆ ಕೂಡಿ ಸಣ್ಣ ಪುಟ್ಟ ವ್ಯಾಪಾರಿಗಳ ಹತ್ತಿರ ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ದಂಡ ಪ್ರಯೋಗ ಮಾಡಿರುತ್ತಾರೆ ಆದರೆ ಇದನ್ನೇ ದೊಡ್ಡ ದೊಡ್ಡ ವ್ಯಾಪಾರಿಗಳಾದ ಹೋಲ್ ಸೇಲ್ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟಗಾರರ ಮೇಲೆ ಯಾವುದೇ ಕ್ರಮ ಇಲ್ಲ ಅವರು ಸರ್ಕಾರದ ಹಾಗೂ ರಾಜ್ಯಪಾಲರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಯಾರ ಅಂಜಿಕೆ ಇಲ್ಲದೆ ಯಾರ ಭಯ ಕೂಡ ಇಲ್ಲದೆ ಬಿಂದಾಸ್ ಆಗಿ ಕರ್ನಾಟಕ ಸರ್ಕಾರ ಬ್ಯಾನ್ ಮಾಡಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರುತ್ತಿದ್ದಾರೆ ಇವರ ಮೇಲೆ ಇನ್ನುವರೆಗೂ ಕಾನೂನು ಕ್ರಮ ಏಕೆ ಜರಗಿಲ್ಲ ಇವರು ಅಂತ ಪ್ರಭಾವಿಗಳೇ??? ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟಂತ ಇಲಾಖೆಗಳು ಉತ್ತರ ನೀಡಬೇಕು ಸಾಮಾನ್ಯ ಜನರಿಗೆ ಹಾಗೂ ಪರಿಸರಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಇದು ನಮ್ಮ ಬಿ ವಿ 5 ನ್ಯೂಸ್ ಪರಿಸರದ ಕಳಕಳಿ
ವರದಿ : ಗುರುರಾಜ ಹಂಚಾಟೆ
ಸರ್ಕಾರದಿಂದ ಬ್ಯಾನ್ ಆಗಿರುವಂತ ಪ್ಲಾಸ್ಟಿಕ್ ವ್ಯಾಪಾರ




