ಮೂಡಲಗಿ: ತಾಲೂಕಿನ ಮಸಗುಪ್ಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಶತಮಾನೋತ್ಸವ ಸಂಭ್ರಮ.
ನೂರು ರ್ಷಗಳನ್ನು ಪೂರೈಸಿರುವ ಈ ಐತಿಹಾಸಿಕ ಶಾಲೆಯು ತನ್ನ ಶತಮಾನೋತ್ಸವ ಸಂಭ್ರಮವನ್ನು ಡಿ.೨೬ ಹಾಗೂ ೨೭ ರಂದು ಆಚರಿಸಿಕೊಳ್ಳುತ್ತಿದೆ.
೧೯೨೫ ರಲ್ಲಿ ಗ್ರಾಮದ ಹನುಮಂತ ದೇವರ ದೇವಸ್ಥಾನದ ಪೌಳಿಯಲ್ಲಿ ಆರಂಭಗೊAಡ ಶಾಲೆಗೆ ಈಗ ನೂರು ರ್ಷ ಪೂರೈಸಿದ ಸಂಭ್ರಮ. ಶಾಲೆಯ ಹಳೆಯ ವಿದ್ಯರ್ಥಿಗಳೆಲ್ಲ ಸೇರಿ ಶಾಲೆಯ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದಾರೆ.
ಹಂತ ಹಂತವಾಗಿ ಬೆಳೆದು ಬಂದ ಶಾಲೆ ಪ್ರವಾಹ ಸಂರ್ಭದಲ್ಲಿ ಮುಳಿಗೆದ್ದು ನಿಂತು ಇಂದು ಇತಿಹಾಸ ಸೃಷ್ಟಿಸಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾಳಜಿಯಿಂದ ಆರ್ಐಡಿಎಫ್ ಅಡಿಯಲ್ಲಿ ೪೮ ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಕೊಠಡಿಗಳು ನಿರ್ಮಾಣಗೊಂಡವು.
ಮಸಗುಪ್ಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಶತಮಾನೋತ್ಸವ ಸಂಭ್ರಮ




