
ಮೊಬೈಲ್ ಗಳಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಣೆ, ಪಾಶ್ಚಿಮಾತ್ಯ ಶೈಲಿಯ ಅಳವಡಿಕೆ ಹಾಗೂ ಸೊಸಿಯಲ್ ಮೀಡಿಯಾಗಳಲ್ಲಿ ಸೆಕ್ಸ್ ವಿಷಯದ ವೈಭವೀಕರಣದಿಂದಾಗಿ ಹದಿ ಹರೆಯದವರಲ್ಲಿ ವಿವಾಹ ಪರ‍್ವ ಲೈಂಗಿಕ ಸಂಬAಧಗಳು ಹೆಚ್ಚಾಗುತ್ತಿವೆ.
ತೀರಾ ಹದಿ ಹರೆಯದವರಲ್ಲಿ ಅಂದರೆ ಪ್ರೌಢಶಾಲೆಗಳಲ್ಲಿರುವಾಗಲೇ ಹುಡುಗ- ಹುಡುಗಿಯರು ವಿವಾಹ ಪರ‍್ವ ಲೈಂಗಿಕ ಸಂಬAಧಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬೆಡವಲ್ಲದ ರ‍್ಭದಾರಣೆಯಿಂದ ಹುಡುಗಿಯರು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ.
ಈಚೆಗೆ ಹಾಸನ ಜಿಲ್ಲೆಯ ಚನ್ನರಾಯಣ ಪಟ್ಟಣದ ಖಾಸಗಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯರ‍್ಥಿನಿ ರ‍್ಭವತಿ ಆಗುವುದರೊಂದಿಗೆ ರಾಜ್ಯದಲ್ಲಿ ಈ ತರಹದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಬಾಲಕಿಯರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಬೆಡವಾದ ರ‍್ಬಧಾರಣೆಯಿಂದಾಗಿ ಅಂಥ ಬಾಲಕಿಯರು ಮುಂದೆ ತಮ್ಮ ಜೀವನಲ್ಲಿ ತೊಂದರೆ ಅನುಭವಿಸುವುದು ಸಾಮಾನ್ಯ. ಇಂಥ ಪ್ರಕರಣಗಳಿಂದಾಗಿ ಬಾಲಕಿಯರು ತೊಂದರೆಗೆ ಒಳಗಾಗುವುದನ್ನು ತಪ್ಪಿಸಲು ಪಾಲಕರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಅಲ್ಲದೇ ಹೈಸ್ಕೂಲ್ ವಿದ್ಯರ‍್ಥಿ, ವಿದ್ಯರ‍್ಥಿನಿಯರಿಗೆ ಮೊಬೈಲ್ ಕೊಡಿಸುವುದು ಕೂಡ ಈಗ ತಪ್ಪು ಎಂದು ಅನಿಸತೊಡಗಿದೆ.




