ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ, ಅನುವಾದಕಿ, ಕವಯತ್ರಿ ಸರಿತಾ ಜ್ಞಾನಾನಂದ (82) ಅನಾರೋಗ್ಯದಿಂದ ಇಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಬೆಂಗಳೂರು ಮೂಲದವರಾಗಿದ್ದ ಸರಿತಾ, ಮೈಸೂರು ವಿಶ್ವವಿದ್ಯಾಲಯದಿಂದ ಬಿಎ, ಬಿಎಡ್ ಪದವಿ ಪಡೆದಿದ್ದರು.
ಬಳಿಕ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್ ಪದವಿ ಪಡೆದಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಸಂಸಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದರು. ಬೆಂಗಳೂರು ಹಾಗೂ ಕೆಜಿಎಫ್ ನಲ್ಲಿ ಶಾಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.
300 ಕ್ಕೂ ಹೆಚ್ಚು ಕಥೆಗಳನ್ನು ಸರಿತಾ ರಚಿಸಿದ್ದರು. ಬೃಂಧಾವನ ಹಾಗೂ ತುಳಸಿ ಕಟ್ಟೆ ಎಂಬ ಎರಡು ಕಥಾಸಂಕಲನಗಳು ಜನಪ್ರಿಯಗೊಂಡಿವೆ. ಅವರ ಹಲವು ಕಥೆಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.




