ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಇದೀಗ ಮತ್ತೆ ಸ್ಟಾರ್ ವಾರ್ ಶುರುವಾಗಿದ್ದು ಡೆವಿಲ್ ಸಿನಿಮಾ ರಿಲೀಸ್ ಬಳಿ ಹಲವು ಕಿಡಿಗೇಡಿಗಳು ನಟ ಸುದೀಪ್ ಹಾಗೂ ಅವರ ಮಗಳ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿ ಕೆಟ್ಟದಾಗಿ ಕಮೆಂಟ್ ಹಾಕಿದರು.
ಈ ವಿಚಾರವಾಗಿ ಕಿಚ್ಚ ಸುದೀಪ್ ಇದೀಗ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು ಕೆಟ್ಟ ಕಮೆಂಟ್ ಹಾಕುವವರು ವೇಸ್ಟ್ ನನ್ನ ಮಕ್ಕಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ ನನ್ನ ಮಗಳು ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ಕಿಡಿ ಕಾರಿದ್ದಾರೆ.
ನಟ ಕಿಚ್ಚ ಸುದೀಪ್ ಪುತ್ರಿ ಸ್ವಾಮಿ ಬಗ್ಗೆ ಕೆಟ್ಟ ಕಮೆಂಟ್ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಾವು ಸೆಲೆಬ್ರೇಶನ್ ಬಗ್ಗೆ ಮಾತನಾಡೋಣ. ಅಂತಹ ವಿಚಾರಗಳ ಬಗ್ಗೆ ಮಾತನಾಡಿಯೇ ಚೀಪ್ ಆಗಿರೋದು ಅವರ ಬಗ್ಗೆ ಮಾತನಾಡಿ ಟೈಂ ವೇಸ್ಟ್ ಮಾಡಲ್ಲ. ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ ಮಕ್ಕಳು. ನಾನು ಫೇಸ್ ಮಾಡಿದ್ದಕ್ಕಿಂತ ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಪುತ್ರಿ ಸಾನ್ವಿ ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ಬೆಂಗಳೂರಿನಲ್ಲಿ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದರು.




