ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಭಾರಿ ಸಂಖ್ಯೆಯ ಭಕ್ತರು ಬಂದ ಕಾರಣ ಡಿಸೆಂಬರ್ 27, 28, 29ರಂದು ಮೂರು ದಿನಗಳ ಕಾಲ ಶ್ರೀವಾಣೆ ಟಿಕೆಟ್ ವಿತರಣೆಯನ್ನು ದೇವಾಲಯದ ಆಡಳಿತ ಮಂಡಳಿ ರದ್ದು ಮಾಡಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಟಿಕೆಟ್ ಕೌಂಟರ್ ನಲ್ಲಿ, ತಿರುಪತಿ ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಶ್ರೀ ವಾಣಿ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ.
ಡಿಸೆಂಬರ್ 30ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಡಿಸೆಂಬರ್ 30, 31 ಹಾಗೂ ಜನವರಿ 1ರಂದು ದರ್ಶನ ಪಡೆಯಲು ಇಚ್ಚಿಸುವವರು ಇ-ಡಿಪ್ ವ್ಯವಸ್ಥೆ ಮೂಲಕ ಟೋಕನ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.




